ಡ್ಯಾನ್ಸರ್ ಬ್ಲೌಸ್ ಒಳಗೆ ಹಣ ತುರುಕಿ ಅಸಭ್ಯವಾಗಿ ವರ್ತಿಸಿದ ಶಾಸಕ..! (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ಬಲರಾಂಪುರ್, ಅ.19- ಉತ್ತರಪ್ರದೇಶದ ಬಲರಾಂಪುರ್‍ನಲ್ಲಿ ಶಾಸಕನೊಬ್ಬ ಮಹಿಳಾ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬಲರಾಂಪುರ್ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಜಗರಾಮ್ ಪಾಸ್ವಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮಹಿಳಾ ಡ್ಯಾನ್ಸರ್ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕನ ಮುಂದೆ ಡ್ಯಾನ್ಸ್ ಮಾಡಿದ್ದಾಳೆ. ಈ ಸಮಯದಲ್ಲಿ ಶಾಸಕ ಮಹಿಳಾ ಡ್ಯಾನ್ಸರ್‍ನ ಬ್ಲೌಸ್ ಒಳಗಡೆ ಹಣವಿಟ್ಟಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು, ಶಾಸಕ ವಿವಾದಕ್ಕೆ ಸಿಲುಕಿಕೊಂಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪಾಸ್ವಾನ್, ಈ ವಿಡಿಯೋ ಹಳೆಯದ್ದು. ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಈ ವಿಡಿಯೋ ಮಾಡಲಾಗಿದೆ. ಆದ್ರೆ ಇದನ್ನು ತಪ್ಪಾಗಿ ತೋರಿಸಲಾಗುತ್ತಿದೆ. ನಾನು ಮಹಿಳಾ ಡ್ಯಾನ್ಸರ್ ಜೊತೆ ಯಾವುದೇ ರೀತಿ ಅಸಭ್ಯವಾಗಿ ವರ್ತಿಸಿಲ್ಲವೆಂದು ಹೇಳಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin