ಡ್ರಗ್ಸ್ ಸಾಗಿಸುತ್ತಿದ್ದ ಪಾರಿವಾಳ ಸೆರೆ, 178 ಮಾತ್ರೆಗಳು ವಶ..!

ಈ ಸುದ್ದಿಯನ್ನು ಶೇರ್ ಮಾಡಿ

Pigeon-drugs

ಕುವೈತ್, ಮೇ 26-ಪಾರಿವಾಳಗಳನ್ನು ಸಂದೇಶ ರವಾನಿಸಲು ಉಪಯೋಗಿಸುತ್ತಿದ್ದ ಕಾಲವೊಂದಿತ್ತು. ಈಗ ಕಬೂತರ್‍ಗಳನ್ನು ಮಾದಕವಸ್ತು ಸಾಗಣೆಗೆ ಬಳಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕುವೈತ್ ನಗರದಲ್ಲಿ ಸೆರೆ ಹಿಡಿಯಲಾದ ಪಾರಿವಾಳವೊಂದರ ಬೆನ್ನಿಗೆ ಸಿಕ್ಕಿಸಲಾಗಿದ್ದ ಚೀಲವೊಂದರಲ್ಲಿ ಡ್ರಗ್ಸ್ ಪತ್ತೆಯಾಗಿದೆ !  ಇರಾನ್‍ನಿಂದ ಬಂದ ಈ ಫರಿಂದಾ ಕುವೈತ್ ನಗರದ ಸುತ್ತ ಹಾರುತ್ತಿರುವಾಗ ಕಸ್ಟಮ್ಸ್ ಅಧಿಕಾರಿಗಳು ಅನುಮಾನದ ಮೇಲೆ ಪಕ್ಷಿಯನ್ನು ಸೆರೆ ಹಿಡಿದು ಪರೀಕ್ಷಿಸಿದಾಗ ವಿನೂತನ ವಿಧಾನದ ಕಳ್ಳಸಾಗಣೆ ದಂಧೆ ಬೆಳಕಿಗೆ ಬಂದಿದೆ. ಅದರ ಬೆನ್ನಿಗೆ ಕಟ್ಟಲಾಗಿದ್ದ ಪಾರಿವಾಳದ ಬೂದು ಬಣ್ಣದ ಚೀಲದಲ್ಲಿ ನಶೆ ಏರಿಸುವ 178 ದುಬಾರಿ ಮಾತ್ರೆಗಳು ಪತ್ತೆಯಾಗಿವೆ.



ಸಾಮಾಜಿಕ ಜಾಲತಾಣಗಳಲ್ಲೂ ಈ ಪಾರಿವಾಳ ಭಾರೀ ಸುದ್ದಿ ಮಾಡುತ್ತಿದೆ. 2016ರಲ್ಲಿ ಕಳ್ಳ ಪರಿವಾಳವೊಂದು ಕೋಸ್ಟಾರಿಕಾ ಕಾರಾಗೃಹಕ್ಕೆ ಡ್ರಗ್ಸ್ ಸಾಗಿಸಲು ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin