‘ಡ್ರಗ್ಸ್ ಸುಲ್ತಾನ್’ ಎಂದೇ ಕುಖ್ಯಾತಿ ಪಡೆದಿರುವ ಪಾಕ್ ಪ್ರಜೆ ಆಸೀಫ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Drugg--01

ಲಂಡನ್, ಆ.27- ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ ಸುಲ್ತಾನ್ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಪ್ರಜೆ ಮಹಮದ್ ಆಸೀಫ್ ಹಾಫೀಜ್‍ನನ್ನು(58) ಬ್ರಿಟನ್ ಮತ್ತು ಅಮೆರಿಕ ಅಧಿಕಾರಿಗಳು ಲಂಡನ್‍ನಲ್ಲಿ ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಹಾಫೀಜ್ ನೇತೃತ್ವದ ಡ್ರಗ್ಸ್ ಕಳ್ಳಸಾಗಣೆ ಜಾಲವು ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆರಾಯಿನ್, ಎಫಿಡರೆನ್ ಇತ್ಯಾದಿ ಮಾದಕವಸ್ತುಗಳ ಉತ್ಪಾದನೆ ಮತ್ತು ಕಳ್ಳಸಾಗಣೆಯ ವ್ಯವಸ್ಥಿತ ದಂಧೆ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಕೀನ್ಯಾಗೆ ಭಾರೀ ಪ್ರಮಾಣದಲ್ಲಿ ಮಾದಕವಸ್ತು ಕಳ್ಳಸಾಗಣೆಯ ಸೂತ್ರಧಾರಿ ಹಾಫೀಜ್ ಎಂಬ ಮಾಹಿತಿ ಖಚಿತವಾದ ನಂತರ ಬ್ರಿಟಿಷ್ ರಾಷ್ಟ್ರೀಯ ಅಪರಾಧ ನಿಗ್ರಹ (ಎನ್‍ಸಿಎ) ಹಾಗೂ ಅಮೆರಿಕದ ಮಾದಕವಸ್ತು ಜಾರಿ ನಿರ್ದೇಶನಾಲಯ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು.

Facebook Comments

Sri Raghav

Admin