ಡ್ರಾನತ್ತ ನಾಲ್ಕನೆ ಟೆಸ್ಟ್ : ನಂ.1 ಸ್ಥಾನ ಕಳೆದುಕೊಳ್ಳಲಿರುವ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

BDD

ಕ್ವೀನ್ಸ್ಪಾರ್ಕ್, ಆ.21- ಭಾರತ ಹಾಗೂ ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯವು ಬಹುತೇಕ ಡ್ರಾನಲ್ಲಿ ಕೊನೆಗೊಳ್ಳಲಿರುವು ದರಿಂದ ಟೀಂ ಇಂಡಿಯಾ ಟೆಸ್ಟ್ ರ್ಯಾಂ ಕಿಂಗ್ನಲ್ಲಿ ನಂಬರ್ 1 ಸ್ಥಾನವನ್ನು ಕಳೆದು ಕೊಳ್ಳಲಿದೆ. ಅಂತಿಮ ಟೆಸ್ಟ್ನ ಮೊದಲ ದಿನ ಕೇವಲ 22 ಓವರ್ಗಳ ಆಟ ಬಿಟ್ಟರೆ ಇನ್ನುಳಿದ ಮೂರು ದಿನಗಳ ಆಟವು ಮಳೆಗೆ ಆಹುತಿಯಾಗಿದೆ.
ನಿನ್ನೆ ಮೂರನೆ ದಿನದ ಆಟದ ವೇಳೆಯೂ ಮೈದಾನದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಕ್ವೀನ್ಪಾರ್ಕ್ ಕ್ರಿಕೆಟ್ ಅಂಗಳದ ಸಿಬ್ಬಂದಿಯನ್ನು ತೇವವನ್ನು ಆರಿಸುವಲ್ಲಿ ನಿರತರಾಗಿದ್ದರು. ಇಂದು ಪಂದ್ಯದ ನಾಲ್ಕನೆ ದಿನವಾಗಿರುವುದರಿಂದ ಭಾರತ ಪಂದ್ಯ ಗೆಲ್ಲುವುದು ಅಸಾಧ್ಯ ಆದ್ದರಿಂದ ನಂ.1 ರ್ಯಾಂ ಕಿಂಗ್ ಸ್ಥಾನದಿಂದ ಕೆಳಗಿಳಿಯದಿದ್ದು ಪಾಕಿಸ್ತಾನ ಟೆಸ್ಟ್ನಲ್ಲಿ ನಂ.1 ತಂಡವೆಂದು ಗುರುತಿಸಿಕೊಳ್ಳಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin