ಡ್ರಾಪ್ ನೆಪದಲ್ಲಿ ಮಾರುತಿ ವ್ಯಾನ್‍ನಲ್ಲಿ ಮಹಿಳೆಯನ್ನು ಕರೆದೊಯ್ದು ಸರ ಅಪಹರಣ 

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮಾ.10-ಡ್ರಾಪ್ ಕೊಡುವ ನೆಪದಲ್ಲಿ ಮಾರುತಿ ವ್ಯಾನ್‍ನಲ್ಲಿ ಮಹಿಳೆಯನ್ನು ಕರೆದೊಯ್ದು ಅವರ ಬಳಿ ಇದ್ದ 40 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಯೊಬ್ಬ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಳ್ಳೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನೆಲ್ಲಿಗೆರೆ ಕ್ರಾಸ್‍ನಲ್ಲಿ ಬಸ್‍ಗಾಗಿ ಕಾಯುತ್ತ ನಿಂತಿದ್ದ ಗೋವಿಂದಘಟ್ಟದ ಗಂಗಮ್ಮ(42) ಎಂಬ ಮಹಿಳೆಯನ್ನು ಅಲ್ಲಿಗೆ ಬಂದ ಬಿಳಿ ಮಾರುತಿ ವ್ಯಾನ್‍ನಲ್ಲಿದ್ದ ವ್ಯಕ್ತಿ ಗೋವಿಂದಘಟ್ಟಕ್ಕೆ ಬಿಡುವುದಾಗಿ ಹೇಳಿ ಕರೆದೊಯ್ದಿದ್ದಾನೆ.ನಂತರ ನಿರ್ಜನ ಪ್ರದೇಶದಲ್ಲಿ ವ್ಯಾನ್ ನಿಲ್ಲಿಸಿ ಮಹಿಳೆಯ ಕೊರಳಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಆಕೆಯನ್ನು ಅಲ್ಲೇ ಬಿಟ್ಟು ಕಾರು ಸಮೇತ ಪರಾರಿಯಾಗಿದ್ದಾನೆ.ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಪೊಲೀಸರು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin