ತಂತ್ರಜ್ಞಾನದಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಕವಲು ದಾರಿ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು, ಆ.20- ವೃತ್ತಿಪರ ಛಾಯಾಗ್ರಾಹಕರು ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಅಷ್ಟೇ ಅಲ್ಲದೆ, ಸೇವೆಯನ್ನಾಗಿಯೂ ಮುಂದುವರಿಸಿಕೊಂಡು ಬಂದಿದ್ದರು. ಆದರೆ ತಂತ್ರಜ್ಞಾನದ ಅವಿಷ್ಕಾರದಿಂದಾಗಿ ಉದ್ಯಮ ಕವಲು ದಾರಿಯಲ್ಲಿ ಸಾಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟಿತರಾಗಿ ವೃತ್ತಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಲೋಚನೆ ಮಾಡಬೇಕು ಎಂದು ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಸುರೇಶ್ ತಿಳಿಸಿದರು.
ಪೋಟೋ ಮತ್ತು ವೀಡಿಯೋಗ್ರಾಫರ್ಸ್ ಅಸೋಷಿಯೇಷನ್ ವತಿಯಿಂದ ನಗರದ ಅನ್ನಪೂರ್ಣ ವೃದ್ಧಾಶ್ರಮದ ನಿವಾಸಿಗಳಿಗೆ ಬಟ್ಟೆ ಹಾಗೂ ಊಟ ವಿತರಿಸುವ ಮೂಲಕ ವಿಶ್ವ ಛಾಯಾಗ್ರಾಹಕರ ದಿನಾಚರಣೆ ವೇಳೆ ಮಾತನಾಡಿದರು. ಕನಿಷ್ಠ ಮೊಬೈಲ್‍ಗಳಿಂದಲೂ ಪೋಟೋ ತೆಗೆಯುವಂತ ತಂತ್ರಜ್ಞಾನ ಬಳಕೆಯಲ್ಲಿರುವುದರಿಂದ ವೃತ್ತಪರರಿಗೆ ಸಂಕಷ್ಟ ಎದುರಾಗಿದೆ ಎಂದು ವಿಷಾದಿಸಿದರು.ತೇಗೂರಿನ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಂಘದ ಕಾರ್ಯಕರ್ತರು ನಂತರ ಅನ್ನಪೂರ್ಣ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಎಲ್ಲ ನಿವಾಸಿಗಳಿಗೆ. ಸೀರೆ, ಪಂಚೆ ಹಾಗೂ ಬನಿಯನ್‍ಗಳನ್ನು ವಿತರಿಸಿದರು.
ಸಂಘದ ಅಧ್ಯಕ್ಷ ಎಂ.ನೀಲಕಂಠ ಮಾತನಾಡಿ, ಛಾಯಾಗ್ರಾಹಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಘಟಿತರಾದಾಗ ಮಾತ್ರ ಬಗೆಹರಿಸಿಕೊಳ್ಳಲು ಸಾಧ್ಯ ಎಂದರು.ಉಪಾಧ್ಯಕ್ಷ ಎನ್.ಎಂ.ಮಂಜೇಗೌಡ, ವೃದ್ಧಾಶ್ರಮದ ವ್ಯವಸ್ಥಾಪಕ ಶಿವಣ್ಣಗೌಡ, ಸಂಘದ ಗೌರವಾಧ್ಯಕ್ಷ ಸಿ.ಪ್ರಕಾಶ್, ಸಂಘದ ಸದಸ್ಯರಾದ ಅವಿನಾಶ್, ರಮೇಶ್, ಆ್ಯಂಟನಿ, ಸಂದೀಪ್, ಮಂಜೇಗೌಡ, ಯೋಗೀಶ್, ದಿನೇಶ್, ಚೇತನ್ ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin