ತಂದೆಯ ಹೋರಾಟವನ್ನು ಮುಂದುವರೆಸುತ್ತೇನೆ : ದರ್ಶನ್ ಪುಟ್ಟಣ್ಣಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Puttannaiah-Son

ಪಾಂಡವಪುರ, ಫೆ.28- ಒಬ್ಬ ಹೋರಾಟಗಾರನ ಮಗನಾಗಿ ಜನಿಸಿದ್ದಕ್ಕೆ ನನಗೆ ತುಂಬ ಹೆಮ್ಮೆಯಾಗಿದೆ. ನನ್ನ ತಂದೆ ಪುಟ್ಟಣ್ಣಯ್ಯ ಅವರ ಹೋರಾಟವನ್ನು ಅತ್ಯಂತ ಪ್ರಾಮಾಣಿಕವಾಗಿ ಮುಂದುವರೆಸುತ್ತೇನೆ ಎಂದು ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿರೇಶ ಬಾನುಲಿ ಸ್ವಾಮಿ ವಿವೇಕಾನಂದ ಕೇಂದ್ರದ ಸಭಾಂಗಣದಲ್ಲಿ ನಡೆದ ನಮ್ಮ ನೇತಾರನಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾಸನ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯಕ್ಕೆ ಹೋರಾಟಗಾರರ ಅನಿವಾರ್ಯತೆ ಇದೆ ಎನಿಸುತ್ತದೆ. ಈ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಅವರಂತೆ ಮತ್ತೊಬ್ಬ ಹೋರಾಟಗಾರರು ರಾಜಕಾರಣಕ್ಕೆ ಬರುವುದು ಅನಿವಾರ್ಯ ಎಂದರು. ಶಾಸಕ ಪುಟ್ಟಣ್ಣಯ್ಯ ಅವರಿಗೆ ಸಮಾನ ಶಿಕ್ಷಣ ಜಾರಿಗೊಳಿಸುವ ಬಗ್ಗೆ ಅಪಾರ ಒಲವಿತ್ತು. ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಅವರು ಧ್ವನಿ ಎತ್ತಿದವರು. ನಾನು ಪಾಂಡವಪುರ ಉಪವಿಭಾಗದಲ್ಲಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ನನ್ನ ಸಮಾಜಮುಖಿ ಕೆಲಸಗಳಿಗೆ ಪುಟ್ಟಣ್ಣಯ್ಯ ಹೆಚ್ಚಿನ ಉತ್ತೇಜನ ನೀಡಿದರು ಎಂದು ಪುಟ್ಟಣ್ಣಯ್ಯ ಅವರ ಜನಪರ ಕೆಲಸವನ್ನು ಸ್ಮರಿಸಿಕೊಂಡರು.
ರೈತ ನಾಯಕಿ ನಂದಿನಿ ಜಯರಾಂ, ವೀರೇಶ ಬಾನುಲಿ ಸಂಸ್ಥೆಯ ಗಂಗಾಧರ್, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook Comments

Sri Raghav

Admin