ತಂದೆ ಮನೆಗೆ ಬಂದಿದ್ದ ಗೃಹಿಣಿ  ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಏ.26- ತಂದೆ ಮನೆಗೆ ಬಂದಿದ್ದ ಗೃಹಿಣಿಯೊಬ್ಬರು ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ನಡೆದಿದೆ. ಮತ್ತೀಕೆರೆ ಗ್ರಾಮದ ಬೋರೇಗೌಡ ಅವರ ಪುತ್ರಿ ರಮ್ಯ(25)ನಾಪತ್ತೆಯಾದ ಗೃಹಿಣಿ.ಏ.13ರಂದು ಗುರುವಾರ ಸುಮಾರು 2ಗಂಟೆ ಸಮಯದಲ್ಲಿ ಮನೆಯಿಂದ ನಾಪತ್ತೆಯಾಗಿರುತ್ತಾರೆ. ರಮ್ಯ ಅವರನ್ನು ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಎಲ್.ಬಿ.ಶ್ರೀಧರ್ ಅವರಿಗೆ ಕಳೆದ 4ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ಈಗ ರಮ್ಯ ಗರ್ಭಿಣಿಯಾಗಿದ್ದು ಹೆರಿಗೆ ಆರೈಕೆಗೆಂದು ಗಂಡನ ಮನೆಯಿಂದ ತಮ್ಮ ತವರು ಮನೆಯಾದ ಕೆ.ಆರ್.ಪೇಟೆ ತಾಲೂಕಿನ ಮತ್ತೀಕೆರೆ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿರುತ್ತಾರೆ. ಕಪ್ಪು ಬಣ್ಣ ಚೂಡಿದಾರ್ ಧರಿಸಿದ್ದು, ಬಿಳಿ ಮೈ ಬಣ್ಣ , ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಈಕೆ 75 ಗ್ರಾಂ ಚಿನ್ನಾಭರಣ ಧರಿಸಿರುತ್ತಾರೆ. ಈಕೆಯ ಸುಳಿವು ಸಿಕ್ಕವರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 9480804860, 08230-262440 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಸಬ್ ಇನ್ಸ್‍ಪೆಕ್ಟರ್ ಕೆ.ಎನ್.ಗಿರೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin