ತಂಬಾಕಿನಿಂದ ಪ್ರತಿದಿನ 200 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Smoking

ಬೆಂಗಳೂರು,ಆ.11- ತಂಬಾಕು ಉತ್ಪನ್ನಗಳಿಂದ ರಾಜ್ಯದಲ್ಲಿ ಪ್ರತಿದಿನ 200 ಜನ ಸಾವನ್ನಪ್ಪುತ್ತಿದ್ದು, ಇದನ್ನು ಸಂಪೂರ್ಣ ನಿಯಂತ್ರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್ ಹೇಳಿದರು.    ವಿಕಾಸ ಸೌಧದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ   ಏರ್ಪಡಿಸಿದ್ದ ತಂಬಾಕು ಉತ್ಪನ್ನಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಕಾರ್ಯಾಗಾರದಲ್ಲಿ ಮಾತನಾಡಿದರು.   ಮಾದಕ ವಸ್ತುಗಳನ್ನು ನಿಯಂತ್ರಿಸಲು ಸರ್ಕಾರದ ವತಿಯಿಂದ ಪ್ರತ್ಯೇಕವಾದ  ವಿಭಾಗವನ್ನು ತೆರೆಯಲಾಗಿದ್ದರೂ ಟೌನ್‍ಹಾಲ್ ಹಿಂಭಾಗದ ರಸ್ತೆಯೊಂದರಲ್ಲಿ ಡ್ರಗ್ಸ್ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿದೆ. ಈ ಮೊದಲು ಖಡಕ್ ಪೊಲೀಸ್ ಅಧಿಕಾರಿಯೊಬ್ಬರು ದುಶ್ಚಟಗಳನ್ನು ನಿಯಂತ್ರಿಸಿದ್ದರು. ಅವರು ವರ್ಗಾವಣೆಗೊಂಡ ನಂತರ ಪುನಾರಾಂಭವಾಗಿದೆ ಎಂದು ವಿಷಾದಿಸಿದರು.

ನಾನು ದೇವರು, ಧರ್ಮ ನಂಬುವುದಿಲ್ಲ. ಆದರೆ ಸಾಯಿಬಾಬನ ಅನುಯಾಯಿಯಾಗಿದ್ದೇನೆ. ಎಲ್ಲ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದಿದ್ದರೂ ಬಿಲ್ಲಿಂಗ್ ಘಟಕ ಮಾತ್ರ ವ್ಯವಸ್ಥಿತವಾಗಿರುತ್ತದೆ. ಆದರೆ ಸಾಯಿಬಾಬ ಅವರಿಗೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯಲ್ಲಿ ಸೌಲಭ್ಯಗಳು ವ್ಯವಸ್ಥಿತವಾಗಿದ್ದರೂ ಬಿಲ್ಲಿಂಗ್ ಘಟಕ ಮಾತ್ರ ಕಾರ್ಯ ನಿರ್ವಹಿಸುವುದಿಲ್ಲ ಎಂದರು.
ಸಾಯಿಬಾಬ ಅವರು ತಲೆಯಿಂದ ಉಂಗುರು, ಸರ ಕೊಟ್ಟಿದ್ದನ್ನು ಕಂಡವರಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವವರು ಅವರಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಮಾಡದಿದ್ದರೂ ಒಂದು ಆಸ್ಪತ್ರೆ ಸ್ಥಾಪಿಸಲಿ ಎಂದು ಸವಾಲು ಹಾಕಿದರು.   ಕರ್ನಾಟಕ ಕ್ಯಾನ್ಸರ್ ರಾಜಧಾನಿ ಎಂದು ಹೇಳಲಾಗುತ್ತಿದೆ. ಆರೋಗ್ಯ ಸಚಿವನಾಗಿ ಇದಕ್ಕಿಂತ ಗೌರವ ಬೇಕೆ ಎಂದು ವ್ಯಂಗ್ಯವಾಗಿ ಹೇಳಿದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin