ತಂಬಾಕು ನಿಯಂತ್ರಣ ತನಿಖಾದಳ ದಾಳಿ : ದಂಡ ವಸೂಲಿ

ಈ ಸುದ್ದಿಯನ್ನು ಶೇರ್ ಮಾಡಿ

tambacco

ಚಿಕ್ಕಮಗಳೂರು, ಅ.21- ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತನಿಖಾದಳದ ಅಧಿಕಾರಿಗಳು ಹಾಗೂ ಜಿಲ್ಲಾ ವಿಚಕ್ಷಾಣಾಧಿಕಾರಿ ಡಾ.ಬಿ.ಎಲ್ ಕಲ್ಪನಾ ನೇತೃತ್ವದಲ್ಲಿ ನಗರದ ವಿವಿಧ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದ್ದಾರೆ. ನಗರದ ಸಂತೆ ಮೈದಾನ, ಮಾರ್ಕೆಟ್ ರಸ್ತೆ ಹಾಗೂ ಬಸವನಹಳ್ಳಿ ಮುಖ್ಯ ಬೀದಿ ಸೇರಿದಂತೆ ಹಲವು ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲಾ ವಿಚಕ್ಷಾಣಾಧಿಕಾರಿಗಳಾದ ಡಾ.ಕಲ್ಪನಾ, ಸರ್ವೇಕ್ಷಣಾಧಿಕಾರಿ ಡಾ.ಮಹಂತೇಶ್ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಾರ್ವಜನಿಕ ಸ್ಥಳ ಹಾಗೂ ಶಾಲಾ ಕಾಲೇಜುಗಳ ಸಮೀಪದಲ್ಲಿ ಈ ಉತ್ಪನ್ನಗಳ ಮಾರಾಟ ಮಾಡದಿರುವಂತೆ ತಿಳಿಸಿದರು.

ಕೋಟ್ಪಾಕಾಯ್ದೆಯಡಿಯಲ್ಲಿ ಸೆಕ್ಷನ್ 4 ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ನಿಷೇಧ ನಿಯಮ ಪಾಲಿಸದ 15 ಅಂಗಡಿ ಮಾಲೀಕರುಗಳಿಗೆ ರೂ. 200 ರವರೆಗೆ ಸ್ಥಳದಲ್ಲಿಯೇ ದಂಡ ವಿಧಿಸಿ 3000 ರೂ.ಗಳನ್ನು ವಸೂಲಿ ಮಾಡಲಾಯಿತು. ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ಆರಕ್ಷಕ ಇಲಾಖೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin