ತಕ್ಷಣಕ್ಕೆ ಪ್ರತಿಭಟನೆ ಕೈಬಿಡದಿದ್ದರೆ ಕಾನೂನು ಕ್ರಮ । ವೈದ್ಯರಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

high-court

ಬೆಂಗಳೂರು,ಜು.6- ಈ ಕೂಡಲೇ ಪ್ರತಿಭಟನೆ ಕೈ ಬಿಡಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಷ್ಕರ ನಿರತ ವೈದ್ಯರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.  ನಿಮ್ಮ ಸಮಸ್ಯೆ ಏನೇದ್ದರೂ ಮುಂದೆ ನೋಡೋಣ. ಮೊದಲು ಮುಷ್ಕರ ಕೈ ಬಿಡಿ. ರೋಗಿಗಳ ಬಗ್ಗೆ ಗಮನಹರಿಸಿ. ಒಂದು ದಿನವೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಕಿಡಿಕಾರಿದೆ.

ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದರೆ ರೋಗಿಗಳ ಪಾಡೇನು? ಕೂಡಲೇ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಾಧೀಶ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು ವಿಭಾಗೀಯ ಪೀಠ ಆದೇಶ ನೀಡಿದೆ.  ವಕೀಲ ಅಮೃತೇಶ್ ಮತ್ತಿತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಷ್ಕರ ನಿರತ ವೈದ್ಯರ ಯಾವುದೇ ಸಮಸ್ಯೆಗಳನ್ನು ಆಲಿಸುವುದಿಲ್ಲ. ಮೊದಲು ಮುಷ್ಕರ ಬಿಟ್ಟು ಕರ್ತವ್ಯದಲ್ಲಿ ನಿರತರಾಗಿ ನಂತರ ನೋಡೋಣ ಎಂದು ನಿರ್ದೇಶನ ನೀಡಿದರು.

ಕೋರ್ಟ್‍ಗೆ ವೈದ್ಯಕೀಯ ಸಂಘಗಳು ಅಭಿಪ್ರಾಯ ತಿಳಿಸುವಲ್ಲಿಯೇ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಯಿತು. ಐಎಂಸಿ ಪರ ವಕೀಲರು ಸೇವೆಗೆ ಹಾಜರಾಗುವುದಾಗಿ ಕೋರ್ಟ್ ಮುಂದೆ ತಮ್ಮ ಅಭಿಪ್ರಾಯ ತಿಳಿಸಿದರೆ ಭಾರತೀಯ ವೈದ್ಯಕೀಯ ಒಕ್ಕೂಟ ನಾಳೆ ಕೆಲಸಕ್ಕೆ ಹಾಜರಾಗುವುದಾಗಿ ತಿಳಿಸಿದೆ. ಆದರೆ ನ್ಯಾಯಾಲಯ ಈ ಕೂಡಲೇ ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕೆಂದು ಖಡಕ್ ಸೂಚನೆ ನೀಡಿದೆ.

ಕಳೆದ ನಾಲ್ಕು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದರಿಂದ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಖಾಸಗಿ ವೈದ್ಯಕೀಯ ನಿಯಂತ್ರಣ ವಿಧೇಯಕ ವಿರೋಧಿಸಿ 25 ಸಾವಿರಕ್ಕೂ ಹೆಚ್ಚು ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸುವರ್ಣಸೌಧದ ಬಳಿ ಸಾವಿರಾರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ಮನವಿ ಮಾಡಿದರೂ ಪ್ರತಿಭಟನೆ ಹಿಂಪಡೆದಿರಲಿಲ್ಲ. ಈಗ ನ್ಯಾಯಾಲಯ ತಪಾರಕಿ ನೀಡಿದೆ.

Facebook Comments

Sri Raghav

Admin