ತಗ್ಗಿದ ಪ್ರವಾಹ : ಸೇತುವೆಗಳು ಸಂಚಾರಕ್ಕೆ ಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

Rain

ಚಿಕ್ಕೋಡಿ,ಆ.11– ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಲಾವೃತ್ತಗೊಂಡಿದ್ದ ಸೇತುವೆಗಳು ಇದೀಗ ಸಂಚಾರಕ್ಕೆ ಮುಕ್ತವಾಗಿದೆ.  ತಾಲ್ಲೂಕಿನ ಒಟ್ಟು ಐದು ಸೇತುವೆಗಳು ಮಳೆಯಿಂದಾಗಿ ಮುಚ್ಚಿ ಹೋಗಿದ್ದವು. ಜನಸಂಪರ್ಕಕ್ಕೂ ಸಾಕಷ್ಟು ತೊಂದರೆ ಎದುರಾಗಿತ್ತು.   ಮಹಾರಾಷ್ಟ್ರದಲ್ಲಿ ಮಳೆ ತಗ್ಗಿದ್ದು , ಕೃಷ್ಣೆಯ ಒಳ ಹರಿವಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ನದಿಗಳು ತುಂಬಿ ಹರಿದು ಆಗಿದ್ದ ಅನಾನುಕೂಲವು ಕ್ರಮೇಣ ಸಹಜ ಸ್ಥಿತಿಯತ್ತ ಬರುತ್ತಿದೆ.   ದೂದ್ ಗಂಗಾ ನದಿಯ ಕಾರದಗಾ-ಬೋಜ ನಡುವಿನ ಸೇತುವೆ ವೇದಗಂಗಾನದಿಯ ಬೋಜವಾಡಿ-ಹುನ್ನಾರಗಿ ಮಧ್ಯದ ಸೇತುವೆ, ಎಕ್ಸಾಂಬ ಗ್ರಾಮದ ದಾನವಾಡ-ದತ್ತವಾಡ ನಡುವನ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಇದರೊಂದಿಗೆ ಚಿಕ್ಕೋಡಿಯ ಮತ್ತೆರಡು ಸೇತುವೆಗಳ ಮೇಲೆ ತುಂಬಿದ್ದ ನೀರು ಕಡಿಮೆಯಾಗಿ ಸಂಚಾರಕ್ಕೆ ಮುಕ್ತವಾಗಿದೆ.

ಈ ಭಾಗದಲ್ಲಿನ ನದಿಗಳು ಕಳೆದ ಕೆಲವು ದಿನಗಳಿಂದ ತುಂಬಿದ್ದರಿಂದ ಎರಡು ಗ್ರಾಮಗಳು ಹಾಗೂ ಎರಡು ಪ್ರದೇಶಗಳಿಗೆ ಸಂಬಂಧ ಏರ್ಪಡುವ ಸೇತುವೆಗಳು ತುಂಬಿ ಜನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.   ಇದೀಗ ಪ್ರಮುಖ ಮೂರು ಸೇತುವೆಗಳು  ಸೇರಿದಂತೆ ಒಟ್ಟು ಐದು ಸೇತುವೆಗಳು ಎಂದಿನಂತೆ ಸಂಚಾರಕ್ಕೆ ಮುಕ್ತವಾಗಿದ್ದು , ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕರ ಸೇವೆಗೆ ಸಮರ್ಪಿತವಾಗಲಿದೆ.  ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು , ತಮ್ಮ ಕೆಲಸ ಕಾರ್ಯಗಳಲ್ಲಿ ನಿಧಾವಾಗಿ ಜನ ತೊಡಗಲು ಆರಂಭಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin