ತಡವಾಗಿ ಬಂದ ಸ್ವರ್ಣ ಪ್ಯಾಸೆಂಜರ್ ರೈಲು : ಪರದಾಡಿದ ಪ್ರಯಾಣಿಕರು

ಈ ಸುದ್ದಿಯನ್ನು ಶೇರ್ ಮಾಡಿ

swarna

ಬೆಂಗಳೂರು,ಆ.22-ಇಂದು 9 ಗಂಟೆಗೆ ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬರಬೇಕಿದ್ದ ಸ್ವರ್ಣ ಪ್ಯಾಸೆಂಜರ್ ರೈಲು 1 ಗಂಟೆ 20 ನಿಮಿಷ ತಡವಾಗಿ ಬಂದಿದ್ದು , ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.   ಮಾರಿಕುಪ್ಪಂನಿಂದ ಬರುವ ಸ್ವರ್ಣ ಪ್ಯಾಸೆಂಜರ್ ಗಾಡಿಯು ನಗರದ ರೈಲ್ವೆ ನಿಲ್ದಾಣಕ್ಕೆ ನಿಗದಿತ ಸಮಯ 9 ಗಂಟೆಗೆ ಆಗಮಿಸಬೇಕಾಗಿತ್ತು. ಆದರೆ ಇವತ್ತು ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ-ಬೆಂಗಳೂರು ಪೂರ್ವ ನಿಲ್ದಾಣಗಳ ನಡುವೆ ಹಾಗೂ ಬೆಂಗಳೂರು ಪೂರ್ವ-ಬೆಂಗಳೂರು ದಂಡು ನಡುವೆ ಸೇರಿದಂತೆ ಒಂದು ಗಂಟೆ 20 ನಿಮಿಷ ರೈಲು ನಿಲ್ಲಿಸಲಾಗಿತ್ತು.   ನಿಲ್ಲಿಸಿದ ಸ್ಥಳಗಳಿಂದ ಬಸ್ ನಿಲ್ದಾಣಗಳು ದೂರವಿದ್ದರಿಂದ ಪ್ರಯಾಣಿಕರು ರೈಲಿನಲ್ಲೇ ಪ್ರಯಾಣ ಬೆಳಸಬೇಕಾದ್ದರಿಂದ ರೈಲು ನಿಂತಿದ್ದರಿಂದ ಪರದಾಟ ಅನುಭವಿಸಿದರು.

ದಿನನಿತ್ಯ ನಗರಕ್ಕೆ ಆಗಮಿಸುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ರೈಲು ತಡವಾದದ್ದರಿಂದ ನಿಗದಿತ ಸಮಯಕ್ಕೆ ಕಛೇರಿಗೆ ಹಾಗೂ ಶಾಲಾಕಾಲೇಜುಗಳಿಗೆ ಹೋಗದೆ ಪರಿತಪಿಸುವಂತಾಯಿತು. ರೈಲ್ವೆ ನಿಲ್ದಾಣ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ರೈಲಿನಲ್ಲೇ ಗೊಣಗುಡುತ್ತಿದ್ದ ದೃಶ್ಯ ಕಂಡುಬಂತು.    ನಮ್ಮ ಮಾರ್ಗದಲ್ಲಿ ರೈಲು ಸೌಲಭ್ಯವೇನೋ ಇದೆ. ಇದರಿಂದ ಬೆಂಗಳೂರಿಗೆ ಬಂದು ಉದ್ಯೋಗ, ವಿದ್ಯಾಭ್ಯಾಸಕ್ಕೆ ಅನುಕೂಲವೂ ಇದೆ. ಆದರೆ ರೈಲು ಇದ್ದರೂ ನಿಗದಿತ ಸಮಯಕ್ಕೆ ನಗರಕ್ಕೆ ತಲುಪಲು ಆಗುತ್ತಿಲ್ಲ. ಪ್ರತಿನಿತ್ಯ ನಿಗದಿತ ಸಮಯಕ್ಕಿಂತ 20-30 ನಿಮಿಷ ತಡವಾಗಿ ರೈಲು ಬರುತ್ತಿತ್ತು.   ಆದರೆ ಇವತ್ತು ಒಂದು ಗಂಟೆ 20 ನಿಮಿಷ ತಡವಾಗಿ ಬಂದಿದೆ. ಇದರಿಂದ ಕಚೇರಿಗೆ ಹೋಗಲಾರದೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

Facebook Comments

Sri Raghav

Admin