ತನಗೆ ಸಿಗದವಳು ಬೇರಾರಿಗೂ ಸಿಗಬಾರದೆಂದು ಮಹಿಳೆಯ ಪ್ರಾಣ ತೆಗೆದ ಪಾಗಲ್ ಪ್ರೇಮಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Pagal--02

ಬೆಂಗಳೂರು,ಜ.10-ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂದು ತೀರ್ಮಾನಿಸಿ ಒಂಟಿ ಮಹಿಳೆಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಕಾರವಾರ ಜಿಲ್ಲೆ , ಶಿರಸಿಯ ರಾಮನ್ ಬಯಲು ನಿವಾಸಿ ಮಹಮದ್ ಮುಬೀನ್(30) ಬಂಧಿ ಆರೋಪಿ.

ಘಟನೆ ವಿವರ:
ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಸುಂಕದಕಟ್ಟೆ, ಕೆಬ್ಬೆಹಳ್ಳಿ, ಸರ್ಕಾರಿ ಶಾಲೆ ಹಿಂಭಾಗದ ದೇವರಾಜು ಎಂಬುವರಿಗೆ ಸೇರಿದ ಮನೆಯಲ್ಲಿ ತಸ್ಲೀಮಾ ಭಾನು(29) ಎಂಬುವರು ವಾಸವಾಗಿದ್ದರು. ಒಂದೇ ಊರಿನವಾರದ ಆರೋಪಿ ಮಹಮದ್ ಮುಬೀನ್ ಜೊತೆ ಸ್ನೇಹ ಹೊಂದಿದ್ದ ತಸ್ಲೀಮಾ ಭಾನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಆದರೆ 2006ನೇ ಸಾಲಿನಲ್ಲಿ ಶಿರಸಿ ನಗರ ಠಾಣೆಯ ಪ್ರಕರಣವೊಂದರಲ್ಲಿ ಮಹಮದ್ ಮುಬೀನ್ ಬಂಧಿತನಾಗಿ ಜೈಲಿಗೆ ಹೋದ ನಂತರ ತಸ್ಲೀಮಾ ಬಾನು ದೂರದ ಸಂಬಂಧಿ ಅಬ್ದುಲ್ ರಜಾಕಾ ಎಂಬುವರೊಂದಿಗೆ ಮದುವೆಯಾಗಿದ್ದರು.

ತದನಂತರವೂ ತಸ್ಲೀಮಾ ಬಾನು ಅವರನ್ನು ಆರೋಪಿ ಮಹಮದ್ ಮುಬೀನ್ ಪ್ರೀತಿಸುತ್ತಿದ್ದು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಈ ನಡುವೆ ತನ್ನ ಮೇಲಿನ ಕ್ರಿಮಿನಲ್ ಪ್ರಕರಣ ಮುಗಿದ ನಂತರ ಮೊಹಮ್ಮದ್ ಮುಬೀನ್ ಹೆಚ್ಚಿನ ಹಣ ಸಂಪಾದನೆ ಮಾಡಲು ಸೌದಿ ಅರೇಬಿಯಾಎ ನಂತರ ದುಬೈಗೆ ಹೋಗುತ್ತಾನೆ.  ಅಲ್ಲಿ ದುಡಿದ ಹಣದಲ್ಲಿ ಆಗಾಗ್ಗೆ ಈಕೆಗೆ ಉಡುಗೊರೆ ಮತ್ತು ಹಣವನ್ನು ನೀಡುತ್ತಿದ್ದನು. ಕರ್ನಾಟಕಕ್ಕೆ ಬಂದಾಗಲೆಲ್ಲ ಈತ ತಸ್ಲೀಮಾ ಬಾನು ಅವರನ್ನು ಭೇಟಿಯಾಗುತ್ತಿದ್ದನು. ಡಿ.20ರಂದು ದುಬೈನಿಂದ ಈತ ಬೆಂಗಳೂರಿಗೆ ವಾಪಸ್ ಆಗಿದ್ದನು.

ಡಿ.26ರಂದು ತಸ್ಲೀಮಾ ಮನೆಗೆ ಬಂದಿದ್ದ ಈತ ಆಕೆಯನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದಾನೆ.   ಈ ಸಂದರ್ಭದಲ್ಲಿ ಮದುವೆಗೆ ತಸ್ಲೀಮಾ ನಿರಾಕರಿಸಿದ್ದರಿಂದ ಕೋಪಗೊಂಡ ಈತ ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂದು ತೀರ್ಮಾನಿಸಿ ಅಡುಗೆ ಮನೆಗೆ ಹೋಗಿ ಚಾಕು ತಂದು ಆಕೆಯ ಕುತ್ತಿಗೆ, ಬೆನ್ನು , ಹೊಟ್ಟೆ ಸೇರಿದಂತೆ ವಿವಿಧ ಭಾಗಗಳಿಗೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಈತ ಉಡುಗೊರೆಯಾಗಿ ಈಕೆಗೆ ನೀಡಿದ್ದ ಚಿನ್ನದ ಸರ, ಕರಿಮಣಿ ಸರ, ಎರಡು ಬಳೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದನು.

ಕೊಲೆ ಸಂಬಂಧ ಮೃತಳ ಸಹೋದರ ಮಹಮದ್ ಹುಸೇನ್ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು.  ಆರೋಪಿಯು ದಾವಣಗೆರೆ, ಹುಬ್ಬಳ್ಳಿ ಹೈದರಾಬಾದ್, ಗೋವಾ ಕಡೆಗಳಲ್ಲಿ ಸುತ್ತಾಡಿ ನಂತರ ಕಾರವಾರಕ್ಕೆ ಬಂದು ತಲೆಮರೆಸಿಕೊಂಡಿದ್ದನು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕಿಪಾಳ್ಯ ಠಾಣೆ ಪೊಲೀಸರು ಎಲ್ಲ ಮೂಲಗಳಿಂದಲೂ ತನಿಖೆ ನಡೆಸಿ ಮಾಹಿತಿ ಕಲೆಹಾಕಿ ಕೊನೆಗೂ ಆರೋಪಿ ಮಹಮದ್ ಮುಬೀನ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಮೊಬೈಲ್, ಪಾಸ್‍ಪೊೀರ್ಟ್, ತಸ್ಲೀಮಾ ಬಾನುಗೆ ಸೇರಿದ ಎರಡು ಸರ, ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ್ ಹೆಗಡೆ, ಇನ್‍ಸ್ಪೆಕ್ಟರ್ ರವಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin