ತನ್ನ ವಾಸದ ಮನೆಯಲ್ಲಿ ಯುವಕ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

huliyaru

ಹುಳಿಯಾರು, ಆ.17- ತನ್ನ ವಾಸದ ಮನೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಯಾರಿನ ಶಂಕರಪುರ ಬಡವಣೆಯಲ್ಲಿ ನಡೆದಿದೆ.ಲೋಕ ಆಕಾಶ್ (23) ಮೃತಪಟ್ಟ ಯುವಕನಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಈತ ಹುಳಿಯಾರಿನ ಲಕ್ಷ್ಮಿ ಹಾರ್ಡ್‍ವೇರ್ ಅಂಗಡಿ ಮಾಲೀಕ ಲೋಕಪ್ರಭಾಕರ್ ಪುತ್ರನಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ, ವಾಸದ ಮನೆಯ ಮೇಲ್ಚಾವಣಿಯಲ್ಲಿನ ಕಬ್ಬಿಣದ ಕೊಕ್ಕೆಗೆ ಸೀರೆ ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin