ತಪ್ಪಿಸಿಕೊಳ್ಳುತ್ತಿದ್ದ ನಾಗರಿಕರ ಮೇಲೆ ಐಎಸ್ ಉಗ್ರರಿಂದ ಬಾಂಬ್ ದಾಳಿ, 12 ಮಂದಿ ಹತ್ಯೆ
ಹಾವಿಜ್ಹಾ, ನ.5-ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಬಲ್ಯವಿರುವ ಉತ್ತರ ಇರಾಕ್ನ ಹಾವಿಜ್ಹಾ ಪ್ರದೇಶದಿಂದ ತಪ್ಪಿಸಿಕೊಳ್ಳುತ್ತಿದ್ದ ನಾಗರಿಕರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. ಉಗ್ರರ ಹಿಡಿತದಲ್ಲಿರುವ ಪ್ರದೇಶಗಳಿಂದ ಪಲಾಯನ ಮಾಡಲು ಯತ್ನಿಸುವ ಜನರು ಎದುರಿಸುತ್ತಿರುವ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಈ ಹತ್ಯಾಕಾಂಡ ಸಾಕ್ಷಿಯಾಗಿದೆ. ತಮ್ಮ ಹಿಡಿತದಲ್ಲಿರುವ ಹಾವಿಜ್ಹಾ ಪ್ರದೇಶದಿಂದ ಪರಾರಿಯಾಗಲು ಜನರು ಯತ್ನಿಸಬಾರದು ಎಂಬ ಉದ್ದೇಶದಿಂದ ಆ ಪ್ರದೇಶದ ಅಲ್ಲಲ್ಲಿ ಐಎಸ್ ಉಗ್ರರು ಬಾಂಬ್ಗಳನ್ನು ಇಟ್ಟಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಬಾಂಬ್ಗಳನ್ನು ಸ್ಫೋಟಿಸಿ ಕೊಲ್ಲುತ್ತಾರೆ ಎಂದು ಇರಾಕ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಿಂದ ಎಸ್ಕೇಪ್ ಆಗಲು ನಿನ್ನೆ ಯತ್ನಿಸಿದ ಜನರ ಗುಂಪೊಂದರ ಮೇಲೆ ಐಎಸ್ ಜಿಹಾದಿಗಳು ಬಾಂಬ್ ಸ್ಫೋಟಿಸಿದರು. ಈ ನರಮೇಧದಲ್ಲಿ 12 ಮಂದಿ ಬಲಿಯಾದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಕ್ಕಳು ಮತ್ತು ಮಹಿಳೆಯರೂ ಉಗ್ರರ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಇರಾಕ್ನ ಕಿರ್ಕುಕ್ ಪ್ರಾಂತ್ಯದಲ್ಲಿರುವ ಹಾವಿಜ್ಹಾ ಪಟ್ಟಣವು 2014ರಿಂದಲೂ ಐಎಸ್ ಉಗ್ರಗಾಮಿಗಳ ವಶದಲ್ಲಿದೆ.
► Follow us on – Facebook / Twitter / Google+