ತಮಿಳುನಾಡಿಗೆ ಕಾವೇರಿ ಮಲಿನ ನೀರು : ಲಿಖಿತ ಪ್ರತ್ಯುತ್ತರ ನೀಡಲು ರಾಜ್ಯಕ್ಕೆ ಕಾಲಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Kaveri-Cauvery
ನವದೆಹಲಿ, ಮಾ.26- ತಮಿಳುನಾಡಿಗೆ ಮಲಿನಯುಕ್ತ ಕಾವೇರಿ ನೀರು ಹರಿಸುತ್ತಿದೆ ಎಂಬ ಪ್ರಕರಣದ ವಿಚಾರಣೆ ನಡೆಸಿದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎರಡು ವಾರಗಳೊಳಗೆ ಲಿಖಿತ ಪ್ರತ್ಯುತ್ತರ ನೀಡುವಂತೆ ಕರ್ನಾಟಕ ರಾಜ್ಯಕ್ಕೆ ಸೂಚನೆ ನೀಡಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯು ಕರ್ನಾಟಕ ಸರ್ಕಾರದ ವಕೀಲರ ಮನವಿಗೆ ಸ್ಪಂದಿಸಿ ಲಿಖಿತ ಪ್ರತ್ಯುತ್ತರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಕರ್ನಾಟಕವು ತನಗೆ ಹರಿಸುತ್ತಿರುವ ಕಾವೇರಿ ನೀರು ಮಲಿನವಾಗಿದೆ ಎಂದು ಆರೋಪಿಸಿ ತಮಿಳುನಾಡು ಮನವಿ ಸಲ್ಲಿಸಿತು.

Facebook Comments

Sri Raghav

Admin