ತಮಿಳುನಾಡಿಗೆ ನೀರು ಬಿಡಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

KRS

ಬೆಂಗಳೂರು, ಆ.23– ನಮಗೆ ಕುಡಿಯುವ ನೀರಿಗೇ ಕಷ್ಟ ಎದುರಾಗಿರುವಾಗ ತಮಿಳುನಾಡು ಕೃಷಿಗಾಗಿ ಕಾವೇರಿ ನೀರು ಕೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರು ಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿಪಾತ್ರದ ಜಲಾಶಯಗಳು ತುಂಬಿದ್ದಾಗ ತಮಿಳುನಾಡಿಗೆ ಈ ಮೊದಲೆಲ್ಲಾ ಸಾಕಷ್ಟು ನೀರು ಬಿಡಲಾಗಿದೆ. ಆದರೆ, ಈಗ ನೀರಿಲ್ಲ. ನಮಗೆ ಕುಡಿಯುವ ನೀರಿಗೇ ಸಂಕಷ್ಟ ಎದುರಾಗಿದೆ. ಅಂತಹದ್ದರಲ್ಲಿ ತಮಿಳುನಾಡು ಸರ್ಕಾರ ಕೃಷಿಗಾಗಿ ನೀರು ಕೇಳುತ್ತಿರುವುದು ಅವೈಜ್ಞಾನಿಕ. ಕೆಆರ್ಎಸ್ನಲ್ಲಿ ನೀರಿಲ್ಲದೇ ಇರುವುದರಿಂದ ತಮಿಳುನಾಡಿನ ಕೃಷಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ತಮಿಳುನಾಡು ನಿನ್ನೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, 50 ಟಿಎಂಸಿ ಕಾವೇರಿ ನೀಡು ಬಿಡಲು ಸೂಚನೆ ನೀಡಬೇಕು ಮತ್ತು ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ತಮಿಳುನಾಡು ಪಾಲಿನ ನೀರು ಬಿಡದೇ ಇರುವುದರಿಂದ ಕೃಷಿ ಬೆಳೆ ಹಾನಿಗೊಳಗಾಗಿ ಉಂಟಾಗಿರುವ ನಷ್ಟವನ್ನು ಭರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಇದು ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ನಾಂದಿಹಾಡಿದೆ.   ರಾಜ್ಯದಲ್ಲಿ ಮಳೆಯ ಅಭಾವದಿಂದ ಎಲ್ಲಾ ಜಲಾಶಯಗಳಲ್ಲೂ ನೀರಿನ ಕೊರತೆ ಉಂಟಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಹೊರತು ಪಡಿಸಿ ಕೃಷಿ ಅಥವಾ ಇನ್ನಾವುದೇ ಉದ್ದೇಶಗಳಿಗೆ ಜಲಾಶಯದ ನೀರನ್ನು ಬಳಕೆ ಮಾಡಬಾರದು ಎಂದು ರಾಜ್ಯ ಸರ್ಕಾರ ಕಟ್ಟಾಜ್ಞೆ ಹೊರಡಿಸಿ ಎಚ್ಚರಿಕೆ ನೀಡಿದೆ. ಅಂತಹದ್ದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸಾಂಬ ಬೆಳೆಗಾಗಿ ಕಾವೇರಿ ನೀರು ಕೊಡಿಸಿ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರದ ನಿಲುವು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ರೈತರಲ್ಲಿ ಕುತೂಹಲ ಕೆರಳಿಸಿತ್ತು. ಇಂದು ಸ್ಪಷ್ಟವಾಗಿ ಈ ಬಗ್ಗೆ ಹೇಳಿರುವ ಮುಖ್ಯಮಂತ್ರಿ ಅವರು, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.  ಕೋರ್ಟ್ಗೂ ಈ ಬಗ್ಗೆ ಮನವರಿಕೆ ಮಾಡುವುದಾಗಿ ಹೇಳಿರುವುದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin