ತಮಿಳುನಾಡಿಗೆ ನೀರು : 30ರಂದು ಕಾಡಾಕ್ಕೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಆ.27- ರಾಜ್ಯ ಸರಕಾರ ತಮಿಳುನಾಡಿಗೆ ನೀರು ಬಿಡುವುದನ್ನು ಹಾಗೂ ಸರ್ಕಾರದ ಧೋರಣೆಯನ್ನು ಖಂಡಿಸಿ ಆ.30ರಂದು ಕಾಡಾ ಕಚೇರಿಗೆ ಸುಮಾರು ಹತ್ತು ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ರಾಜ್ಯದ ಮುಖ್ಯ ಮಂತ್ರಿಗಳು ಅಣೆಕಟ್ಟಿನಿಂದ ನೀರು ಹರಿಸುವುದಿಲ್ಲ ಎಂದು ಹೇಳಿಕೆಯನ್ನು ನೀಡುತ್ತಾರೆ. ಇನ್ನೊಂದೆಡೆ ನಮ್ಮ ಅಣೆಕಟ್ಟುಗಳಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇದನ್ನು ಮುಖ್ಯ ಮಂತ್ರಿಗಳು ಗಮನಿಸಬೇಕು ಎಂದರು.
ವಾರ್ಷಿಕವಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರಾಜ್ಯದ ಜಲಾಶಯಗಳಲ್ಲಿ ಶೇ.50 ರಷ್ಟು ನೀರಿನ ಕೊರತೆ ಉಂಟಾಗಿದೆ. ಈಗಾಗಲೇ ಅಚ್ಚುಕಟ್ಟು ಪ್ರದೇಶದಲ್ಲಿ ಶೇ.60 ರಷ್ಟು ಬಿತ್ತನೆ ಕಾರ್ಯಮುಗಿದಿದೆ. ಅದರ ಅರಿವಿಲ್ಲದೆ ತಮಿಳುನಾಡಿಗೆ ಪ್ರತಿದಿನ ಕಬಿನಿಯಿಂದ 400 ಕ್ಯೂಸೆಕ್ಸ್, ಹಾಗೂ ಕೆಆರ್‍ಎಸ್‍ನಿಂದ 800 ಕ್ಯೂಸೆಕ್ಸ್, ನೀರನ್ನು ಹರಿಸಲಾಗುತ್ತಿದೆ. ಇದರಿಂದ ರಾಜ್ಯದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.
ಆದರೆ ಸರ್ಕಾರ ಆ.30ರಿಂದ ನೀರು ನಿಲ್ಲಿಸುವುದಾಗಿ ತಿಳಿಸಿದೆ ಎಂದು ನುಡಿದರು. ರಾಜ್ಯ ಸರಕಾರ ಕೂಡ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಇದೆ ಆ. 30ರಂದು ಮೈಸೂರಿನ ಕಾಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.ತಗಡೂರು ಜಿ,ಪಂ ಸದಸ್ಯ ಸದಾನಂದ, ಕಪಿಲೇಶ್, ಹಾಡ್ಯ ರವಿ, ಚಿಕ್ಕಸ್ವಾಮಿ, ಮಹಾದೇವಸ್ವಾಮಿ, ಬಸವಣ್ಣ, ರಾಜಣ್ಣ, ಮಹೇಶ್, ಸೋಮಶೇಖರ್, ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin