ತಮಿಳುನಾಡಿನಲ್ಲಿ ಇಂದೂ ಮುಂದುವರೆದ ಪೊಲಿಟಿಕಲ್ ಹೈಡ್ರಾಮಾ : ಈವರೆಗಿನ Updates ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Sasikala-Tamilnadu

ಚೆನ್ನೈ, ಫೆ.9-ಅಕ್ರಮ ಆಸ್ತಿ ವಿವಾದಕ್ಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯುವಂತೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ರಾಜ್ಯಪಾಲರ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ.  ಇದರ ನಡುವೆ ಎಐಎಡಿಎಂಕೆ ಶಾಸಕರು ರೆಸಾರ್ಟ್‍ನಲ್ಲಿ ದಿಗ್ಬಂಧನಕ್ಕೆ ಒಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆಗೆ ಕೂಡ ಆದೇಶಿಸಿದ್ದಾರೆ ಎಂದು ಹೇಳಲಾಗಿದೆ.  ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೆ ಕೆಲ ಶಾಸಕರು ಹಾಗೂ ಕೆಲ ಬೆಂಬಲಿಗರು ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿರುವ ಘಟನೆ ಕೂಡ ವರದಿಯಾಗಿದೆ.

ಗೊಂದಲದ ಗೂಡಾಗಿರುವ ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಪಹಪಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್ ಅವರ ಕನಸು ಸಾಕಾರಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.   ಶಶಿಕಲಾ ಎರಡನೇ ಆರೋಪಿಯಾಗಿರುವ 66 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣದ ತೀರ್ಪು ಸುಪ್ರೀಂಕೋರ್ಟ್‍ನಿಂದ ಹೊರಬೀಳುವವರೆಗೆ ಕಾಯುವಂತೆ ಶಶಿಕಲಾ ಅವರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ತಾಕೀತು ಮಾಡಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ. ಈ ಮೂಲಕ ಚಿನ್ನಮ್ಮಗೆ ದೊಡ್ಡ ಶಾಕ್ ನೀಡಿದಂತಾಗಿದೆ.

ಇದೇ ವೇಳೆ ಮುಂದಿನ ಆದೇಶದವರೆಗೂ ತಮಿಳುನಾಡಿನ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಪನ್ನೀರ್ ಸೆಲ್ವಂ ಅವರಿಗೆ ಸೂಚನೆ ನೀಡಿದ್ದಾರೆ.
ಇದರೊಂದಿಗೆ ಶಶಿಕಲಾ ಮತ್ತು ಸೆಲ್ವಂ ಬಣಕ್ಕೆ ಮುಂದಿನ ರಾಜಕೀಯ ದಾಳ ಉರುಳಿಸಲು ಕಾಲಾವಕಾಶ ದೊರೆತಿದ್ದು, ಹಗ್ಗ-ಜಗ್ಗಾಟದೊಂದಿಗೆ ತಂತ್ರ-ಪ್ರತಿತಂತ್ರ ಸಮರವೂ ಮುಂದುವರಿದಿದೆ.   ಒಂದು ಮೂಲದ ಪ್ರಕಾರ, ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರಿಗೆ ಚಿನ್ನಮ್ಮ ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಮುನ್ನಡೆಸುವ ಬಗ್ಗೆ ಒಲವಿಲ್ಲ. ವಿನಾಕಾರಣ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಸಿಕ್ಕಿಕೊಳ್ಳಲು ರಾಜ್ಯಪಾಲರೂ ತಯಾರಿಲ್ಲ.

ಶಾಸಕರ ಬೆಂಬಲವನ್ನು ಪರಿಗಣಿಸಿ ಶಶಿಕಲಾರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರೆ, ಸುಪ್ರೀಂಕೋರ್ಟ್‍ನಿಂದ ಅವರ ವಿರುದ್ಧ ತೀರ್ಪು ಹೊರಬಿದ್ದರೆ ಮತ್ತೆ ಗೊಂದಲ ಉಂಟಾಗುತ್ತದೆ ಎಂಬ ಕಾನೂನು ತಜ್ಞರ ಸಲಹೆಗಳನ್ನು ರಾಜ್ಯಪಾಲರು ಪರಿಗಣಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದಿಂದಲೂ ಇದೇ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸಿರುವ ವಿದ್ಯಾಸಾಗರ ರಾವ್ ಶಶಿಕಲಾರಿಗೆ ಈ ಸೂಚನೆ ನೀಡಿದ್ದಾರೆ.   ಪ್ರಸ್ತುತ ಸೆಲ್ವಂ ಉಸ್ತುವಾರಿ ಮುಖ್ಯಮಂತ್ರಿಯಾಗಿರುವುದರಿಂದ ಅವರನ್ನು ಅದೇ ಹಂಗಾಮಿ ಸ್ಥಾನದಲ್ಲಿ ಮುಂದುವರಿಸುವ ಮೂಲಕ ರಾಜ್ಯಪಾಲರು ಜಾಣ್ಮೆಯ ನಡೆ ಅನುಸರಿಸಿದ್ದಾರೆ.  ರಜನಿ ಸೃಷ್ಟಿಸಿದೆ ಸಂಚಲನ : ಇದೇ ವೇಳೆ ಸೂಪರ್‍ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶಿಸುವ ಸಾಧ್ಯತೆ ಬಗ್ಗೆ ಅಸಂಖ್ಯಾತ ಅಭಿಮಾನಿಗಳಲ್ಲಿ ಸಂಚಲನ ಉಂಟಾಗಿದ್ದು ಮತ್ತೊಂದು ಹೊಸ ಬೆಳವಣಿಗೆಯಾಗಿದೆ.

25 ಶಾಸಕರು ಎಸ್ಕೇಪ್ :

ಇದೇ ವೇಳೆ ಶಶಿಕಲಾ ಕ್ಯಾಂಪ್‍ನಿಂದ 25 ಶಾಸಕರು ಪರಾರಿಯಾಗಿದ್ದು, ಪನ್ನೀರ್ ಸೆಲ್ವಂ ಬಣ ಸೇರಿದ್ದಾರೆಂದು ಮೂಲಗಳು ಹೇಳಿವೆ.   ಮಾದ್ಯಮದ ಮೇಲೆ

ಶಾಸಕರ ದೌರ್ಜನ್ಯ :

ಇದೇ ವೇಳೆ, ರೆಸಾರ್ಟ್ ರಾಜಕೀಯದ ಬಗ್ಗೆ ವರದಿ ಮಾಡಲು ಅಲ್ಲಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಶಾಸಕರು ಕಲ್ಲುತೂರಾಟ ನಡೆಸಿ ದೌರ್ಜನ್ಯ ಎಸಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin