ತಮಿಳುನಾಡಿನಲ್ಲಿ ಜಯಲಲಿತಾ ಕುರ್ಚಿಗಾಗಿ ರಾಜಕೀಯ ಲೆಕ್ಕಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Jayalalitjh-01

ಚೆನ್ನೈ, ಅ.5– ಮುಖ್ಯಮಂತ್ರಿ ಜಯಲಲಿತಾ ಅವರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಲೆಕ್ಕಚಾರ ಆರಂಭವಾಗಿದೆ. ಜಯಾ ಆಸ್ಪತ್ರೆಗೆ ಸೇರಿ 13 ದಿನಗಳು ಕಳೆದಿದೆ. ಇತ್ತ ಸಿಎಂ ಇಲ್ಲದೆ ಆಡಳಿತ ಯಂತ್ರ ಕುಸಿಯುತ್ತಿದೆ ಎಂಬ ಆರೋಪವನ್ನು ಎಐಎಡಿಎಂಕೆ ಪಕ್ಷ ಕಟ್ಟಿಕೊಳ್ಳುತ್ತಿದೆ. ಹೀಗಾಗಿ ಅಮ್ಮನ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬುವ ಮತ್ತೊಬ್ಬ ನಿಷ್ಠಾವಂತ ವ್ಯಕ್ತಿಯನ್ನು ಸಿಎಂ ಮಾಡುವುದು ಈಗ ತಮಿಳುನಾಡು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಅಮ್ಮ ಹಾಸಿಗೆ ಹಿಡಿದಿದ್ದೇ ತಡ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಂಚಲನ ಉಂಟಾಗಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಸಿಗೆ ಹಿಡಿದು ಮಲಗಿರುವುದು ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿಯನ್ನು ಬೀಸುತ್ತಿದೆ. ಅಮ್ಮನ ಬೆನ್ನಿಗೆ ನಿಂತಿದ್ದವರೆ ಅಧಿಕಾರಕ್ಕೆ ಮುಗಿ ಬಿಳುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಒಂದು ಕಡೆ ಆಸ್ಪತ್ರೆಯಲ್ಲಿರುವ ಜಯಲಲಿತಾ ಬದಲು ಮತ್ತೊಬ್ಬರು ಸಿಎಂ ಸ್ಥಾನವನ್ನು ಅಲಂಕರಿಸಿ ರಾಜ್ಯವನ್ನು ಮುನ್ನಡೆಸಬೇಕೆಂಬ ಮಾತು ಅಮ್ಮನ ಆಪ್ತ ವಲಯದಲ್ಲೇ ಕೇಳಿ ಬರುತ್ತಿದೆ, ಇಷ್ಟು ದಿನ ಅಮ್ಮನ ಮುಂದೆ ಕೈ ಕಟ್ಟಿ ನಿಲ್ಲುತ್ತಿದ್ದವರು ಇಂದು ಅಧಿಕಾರಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಇದಲ್ಲದೆ, ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮದ್ರಾಸ್ ಹೈ- ಕೋರ್ಟ್ ತಡೆಯಾಜ್ಞೆ ನೀಡಿದೆ. ಮೀಸಲಾತಿ ಪಟ್ಟಿ ಸರಿಯಿಲ್ಲ ಎಂದು ಕೋರ್ಟ್ ನಲ್ಲಿ ಡಿಎಂಕೆ ಪ್ರಶ್ನೆ ಮಾಡಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಎಲೆಕ್ಷನ್ಗೆ ತಡೆಜ್ಞೆ ನೀಡಿದೆ.
ಇದು ಎಐಎಡಿಎಂಕೆ ನಾಯಕರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿಸಿದೆ. ಇದಲ್ಲದೆ, ಮತ್ತೊಂದೆಡೆ ವಿರೋಧ ಪಕ್ಷಗಳು ಬೇರೆ ಮುಖ್ಯಮಂತ್ರಿ ನೇಮಕಕ್ಕೇ ಆಗ್ರಹಿಸವೆ, ವಿಜಯಕಾಂತ್ ರಾಜ್ಯಕ್ಕೆ ಬೇರೊಬ್ಬ ಮುಖ್ಯಮಂತ್ರಿನ್ನು ನೇಮಿಸುವಂತೆ ಒತ್ತಾಯಿಸುತ್ತಿದ್ದಾರೆ.

ಸಿಎಂ ಕಾರ್ಯ ನಿರ್ವಹಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸುವವರು ಯಾರು ಎಂಬ ಪ್ರಶ್ನೆ ವಿರೋಧ ಪಕ್ಷಗಳಿಂದ ಎದ್ದಿದೆ. ಸಿಎಂ ಇಲ್ಲದಿದ್ದಕ್ಕೆ ಕೇಂದ್ರ ನಮಗೆ ಅನ್ಯಾಯವೆಸಗಿದೆ. ಹೀಗಾಗಿ ಸಿಎಂ ಜಯಲಲಿತಾ ಅವರು ಒಂದು ಕ್ಷಣವೂ ಯೋಚಿಸದೆ ಪರ್ಯಾಯವಾಗಿ ತಾತ್ಕಾಲಿಕ ಸಿಎಂ ಆಗಿ ಯಾರನ್ನಾದರು ನೇಮಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿಜಯಕಾಂತ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin