ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ಗಾಗಿ ಭಾರಿ ಪ್ರತಿಭಟನೆ, ಸಂಧಾನಕ್ಕೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Jelikattu-01

ಚೆನ್ನೈ, ಜ.18-ಐದು ನೂರು ವರ್ಷಗಳಷ್ಟು ಹಳೆಯದಾದ ಜಲ್ಲಿಕಲ್ಲು ಕ್ರೀಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದ ವಿರುದ್ಧ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ವ್ಯಾಪಕ ಪ್ರತಿಭಟನೆಗಳು ಮುಂದುವರೆದಿದೆ. ರಾಜಧಾನಿ ಚೆನ್ನೈನ ಮರೀನಾ ಬೀಚ್‍ನಲ್ಲಿ ನಿನ್ನೆ 5,000ಕ್ಕೂ ಹೆಚ್ಚು ಮಂದಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಹೋರಾಟದ ಕಾವು ಮತ್ತಷ್ಟು ಏರಿದೆ.  ಈ ಮಧ್ಯೆ, ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನಿಸಿರುವ ರಾಜ್ಯ ಸರ್ಕಾರವು ಈ ಪ್ರಾಚೀನ ಸಂಪ್ರದಾಯಿಕ ಕ್ರೀಡೆಯನ್ನು ಮುಂದುವರಿಸಲು ತಾನು ಬದ್ಧವಿರುವುದಾಗಿ ಪ್ರಕಟಿಸಿದೆ.

ಸಂಕ್ರಾಂತಿ (ಪೊಂಗಲ್) ಹಿಂದಿನ ದಿನದಿಂದಲೂ ಸುಪ್ರೀಂಕೋರ್ಟ್ ನಿಲುವನ್ನು ಖಂಡಿಸಿ ಜಲ್ಲಿಕಟ್ಟು ಆಚರಣೆಯ ಕೇಂದ್ರ ಸ್ಥಳ ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಭಾರೀ ಪ್ರತಿಭಟನೆಗಳು ಮುಂದುವರಿದಿದೆ. ಪೊಂಲೀಸರೊಂದಿಗೆ ಘರ್ಷಣೆ ಮತ್ತು ಲಾಠಿ ಪ್ರಹಾರಗಳು ನಡೆದು, ಈವರೆಗೆ 450ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.
ಆದರೆ, ಪ್ರತಿಭಟನೆ ಸಂಕ್ರಾಂತಿ ನಂತರವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆಗೆ ಸೇರ್ಪಡೆಯಾಗುತ್ತಿರುವ ಯುವಕರು ಮತ್ತು ವಿದ್ಯಾರ್ಥಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಮದುರೈ, ಕೃಷ್ಣಗಿರಿ, ಸೇಲಂ ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸುವುದು ಪೊಂಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ನಡುವೆ ಚೆನ್ನೈನ ಮರೀನಾ ಬೀಚ್‍ನಲ್ಲಿ ನಿನ್ನೆ 5,000ಕ್ಕೂ ಹೆಚ್ಚು ಮಂದಿ ಮೇಣದ ಬತ್ತಿಗಳನ್ನು ಹಿಡಿದು ಅಹೋರಾತ್ರಿ ಧರಣಿ ನಡೆಸಿದರು.  ಪ್ರತಿಭಟನೆ ಕಾವು ಏರುತ್ತಿರುವುದರಿಂದ ರಾಜ್ಯ ಸರ್ಕಾರದ ಪರವಾಗಿ ಮೀನುಗಾರಿಕೆ ಸಚಿವ ಡಿ. ಜಯಕುಮಾರ್ ಮತ್ತು ಹಿರಿಯ ಸಚಿವ ಕೆ ಪಾಂಡ್ಯರಾಜನ್ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಈ ಪ್ರಾಚೀನ ಸಂಪ್ರದಾಯಿಕ ಕ್ರೀಡೆಗೆ ಯಾವುದೇ ಚ್ಯುತಿ ಬರದಂತೆ ಮುಂದುವರಿಸಲು ಸರ್ಕಾರ ಬದ್ಧವಿರುವುದಾಗಿ ಆಶ್ವಾಸನೆ ನೀಡಿದ್ದಾರೆ.  ಈ ನಡುವೆ ನಿನ್ನೆ ವೆಲ್ಲೂರಿನ ವಿಲ್ಲುಕೊಟೈನಲ್ಲಿ ಜಲ್ಲಿ ಕಟ್ಟು ಆಚರಣೆ ವೇಳೆ ಗೂಳಿ ಗುದ್ದಿ ಯುವಕನೋರ್ವ ಮೃತಪಟ್ಟಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin