ತಮಿಳುನಾಡಿನಲ್ಲಿ 7 ದಿನಗಳ ರೆಸಾರ್ಟ್ ರಾಜಕೀಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Golden-Bay

ಚೆನ್ನೈ, ಫೆ.15-ತಮಿಳುನಾಡು ರಾಜಕೀಯ ಬೆಳವಣಿಗೆಯಿಂದಾಗಿ ಕವತ್ತೂರಿನಲ್ಲಿರುವ ಐಷಾರಾಮಿ ಗೋಲ್ಡನ್ ಬೇ ಬೀಚ್ ರೆಸಾರ್ಟ್‍ನಲ್ಲಿ 100 ಶಾಸಕರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಏಳು ದಿನಗಳ ಕಾಲ ವಾಸ್ತವ್ಯ ಹೂಡಿದ್ದಕ್ಕೆ ಖರ್ಚಾಗಿದ್ದೆಷ್ಟು?   ಈ ದುಬಾರಿ ರೆಸಾರ್ಟ್‍ನಲ್ಲಿ ಮೂರು ಶ್ರೇಣಿಯ 60 ಕೊಠಡಿಗಳಿವೆ. ಟ್ರಾಂಕ್ವಿಲ್ ರೂಂನಲ್ಲಿ ಒಂದು ದಿನ ವಾಸ್ತವ್ಯ ಹೂಡಲು 6,500 ರೂ. ವೆಚ್ಚ, ಅದೇ ರೀತಿ ಬೇ ವ್ಯೂಗೆ 6,600 ಹಾಗೂ ಪ್ಯಾರಾಡೈಸ್ ಸೂಟ್ ರೂಂಗೆ 9,900 ರೂ.ಗಳು. ಇಷ್ಟು ಜನರಿಗೆ ಕೊಠಡಿ ಒದಗಿಸಲು ರಿಯಾಯಿತಿ ದರದಲ್ಲಿ ಪ್ರತಿ ದಿನಕ್ಕೆ 7,000 ರೂ. ವೆಚ್ಚವಾದರೂ 7 ದಿನಕ್ಕೆ ಅಂದಾಜು 50 ಲಕ್ಷ ರೂ.ಗಳು.

ಮೇಲಿನ ಮೊತ್ತ ಕೇವಲ ವಸತಿಗೆ ಮಾತ್ರ ಲೆಕ್ಕ ಹಾಕಲಾಗಿದೆ. ಇನ್ನು ನೀರು, ಕಾಫಿ/ಟೀ, ಉಪಾಹಾರ, ಮಧ್ಯಾಹ್ನದ ಭೋಜನ, ಸಂಜೆಯ ಸ್ನ್ಯಾಕ್ಸ್ ಬೀಚನ್‍ನಲ್ಲಿ ಮೋಜಿನಾಟ ಮತ್ತು ರಾತ್ರಿ ಗುಂಡು-ತುಂಡಿನ ಊಟದ್ದೂ ದುಬಾರಿ ಬಿಲ್. ಒಬ್ಬರಿಗೆ ಪ್ರತಿದಿನ 2000 ರೂ. ಆದರೂ ಸುಮಾರು 200 ಮಂದಿಗೆ ಏಳು ದಿನಕ್ಕೆ 28 ಲಕ್ಷ ರೂ.ಗಳು. ಇತರ ಖರ್ಚು ವೆಚ್ಚಗಳು 15 ಲಕ್ಷ ರೂ.ಗಳು.   ಶಾಸಕರ ಕುದುರೆ ವ್ಯಾಪಾರ ತಡೆಯಲು ಇಷ್ಟು ಹಣ ವೆಚ್ಚ ಮಾಡಿದ್ದ ಚಿನ್ನಮ್ಮ ನೇತೃತ್ವದ ಪಕ್ಷದ ಶ್ರಮವು ಸುಪ್ರೀಂಕೋರ್ಟ್ ತೀರ್ಪಿನಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin