ತಮಿಳುನಾಡಿನ 13 ಬೆಸ್ತರ ಬಂಧಿಸಿದ ಶ್ರೀಲಂಕಾ ನೌಕಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಮಾ.2- ಭಾರತ-ಶ್ರೀಲಂಕಾ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 13 ಬೆಸ್ತರನ್ನು ಕಚತೀವು ಬಳಿ ದ್ವೀಪರಾಷ್ಟ್ರದ ನೌಕಾಪಡೆ ಬಂಧಿಸಿದೆ. ಬಂಧಿತರಲ್ಲಿ ನಾಲ್ವರು ರಾಮೇಶ್ವರಂ ಹಾಗೂ ಇತರ 9 ಮಂದಿ ನಾಗಪಟ್ಟಣ ಜಿಲ್ಲೆಯವರು. ಇವರನ್ನು ಶ್ರೀಲಂಕಾ  ನೌಕಾಪಡೆ ಯೋಧರು ವಡಮರಚಿ ಮತ್ತು ಕಂಗೇಸನ್‍ತುರೈಗೆ ಕರೆದೊಯ್ದಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಅಮಲಾ ಕ್ಸೇವಿಯರ್ ತಿಳಿಸಿದ್ದಾರೆ.  ಬಂಧಿತರಿಂದ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, 20ಕ್ಕೂ ಹೆಚ್ಚು ಮೀನುಗಾರಿಕೆ ಬಲೆಗಳನ್ನು ನಾಶಗೊಳಿಸಲಾಗಿದೆ.

Facebook Comments

Sri Raghav

Admin