ತಮಿಳುನಾಡಿನ 2,500 ಬೆಸ್ತರ ಬೆನ್ನಟ್ಟಿ ಬಂದ ಶ್ರೀಲಂಕಾ ನೌಕಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Srilanka-01

ರಾಮೇಶ್ವರ, ಡಿ.15-ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ತೀವ್ರಗೊಂಡಿದೆ. ಕಚ್ಚತೀವು ಕರಾವಳಿ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಯಾಂತ್ರಿಕೃತ ದೋಣಿಗಳ ಬಲೆಗಳನ್ನು ಕತ್ತರಿಸಿದ ಶ್ರೀಲಂಕಾ ನೌಕಾ ಸಿಬ್ಬಂದಿ ಮೀನುಗಾರಿಕೆಯಲ್ಲಿ ತೊಡಗಿದ್ದ 2,500ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ಬೆನ್ನಟ್ಟಿ ಚದುರಿಸಿರುವ ಘಟನೆ ನಿನ್ನೆ ನಡೆದಿದೆ.  ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಯ ದೌರ್ಜನ್ಯದಿಂದಾಗಿ ನೂರಾರು ಬೆಸ್ತರು ಹೆದರಿ ಕಂಗಾಲಾಗಿ ಮೀನು ಹಿಡಿಯದೇ ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಸೆಸುರಾಜಾಆರೋಪಿಸಿದ್ದಾರೆ.

ರಾಮೇಶ್ವರಂ ಮೀನುಗಾರರು ನಿನ್ನೆ 583 ದೋಣಿಗಳಲ್ಲಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದರು. ಅಗಿ ಅಲ್ಲಿಗೆ ಧಾವಿಸಿದ ನೌಕಾ ಸಿಬ್ಬಂದಿ 50ಕ್ಕೂ ಹೆಚ್ಚು ದೋಣಿಗಳನ್ನು ಸುತ್ತುವರಿದು ಮೀನುಗಾರಿಕೆ ಬಲೆಗಳನ್ನು ಕತ್ತರಿಸಿದರು ಹಾಗೂ ಅಲ್ಲಿಂದ ಹಿಂದುರುವಂತೆ ಬೆದರಿಸಿದರು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದಾಗ ದೌರ್ಜನ್ಯ ನಡೆಸಿದ ಸಿಬ್ಬಂದಿ ಮೀನುಗಾರರನ್ನು ಬೆನ್ನಟ್ಟಿ ಚದುರಿಸಿದರು ಎಂದು ಅವರು ದೂರಿದ್ದಾರೆ.  ಕಳೆದ ಕೆಲವು ದಿನಗಳಿಂದ ರಾಮೇಶ್ವರ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆ ತಮಿಳುನಾಡು ಬೆಸ್ತರಿಗೆ ಮೀನುಗಾರಿಕೆಗೆ ಅಡ್ಡಿಯುಂಟು ಮಾಡಿ ದೋಣಿಗಳು ಮತ್ತು ಬಲೆಗಳಿಗೆ ಹಾನಿ ಮಾಡುತ್ತಿದೆ.

Eesanje News App

Facebook Comments

Sri Raghav

Admin