ತಮಿಳುನಾಡು ಕರಾವಳಿಯಲ್ಲಿ ಅಪಾಯದಲ್ಲಿದ್ದ ಸಿಲುಕಿದ್ದ 7 ಬೆಸ್ತರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Srilanka-01

ನವದೆಹಲಿ, ನ.7-ತಮಿಳುನಾಡು ಕರಾವಳಿಯಲ್ಲಿ ಎಂಜಿನ್ ವೈಫಲ್ಯದಿಂದ ಸಮುದ್ರ ಮಧ್ಯೆ ಕೆಟ್ಟು ನಿಂತ ದೋಣಿಯಲ್ಲಿ ಅಪಾಯಕ್ಕೆ ಸಿಲುಕಿದ್ದ ಏಳು ಜನ ಬೆಸ್ತರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.  ಮೀನುಗಾರಿಕೆ ನಡೆಸಿ ನ.5ರಂದು ಬಂದರಿಗೆ ಹಿಂದಿರುಗಬೇಕಿದ್ದ ದೋಣಿಯ ಎಂಜಿನ್ ಕೆಟ್ಟು ನಿಂತು ಸಮುದ್ರದಲ್ಲಿ ಪ್ರತಿಕೂಲ ಪರಿಣಾಮದಿಂದಾಗಿ ಏಳು ಮಂದಿ ಅಪಾಯಕ್ಕೆ ಸಿಲುಕಿದ್ದರು. ಮೊಬೈಲ್ ಕರೆಯಿಂದ ಸುದ್ದಿ ತಿಳಿದ ಕೂಡಲೇ ಕರಾವಳಿ ರಕ್ಷಣಾ ಪಡೆಯ ಅಭಿರಾಜ್ ನೌಕೆ ಮೂಲಕ ಶೋಧ ನಡೆಸಿ ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಸಾಗರ ರಕ್ಷಣಾ ಸಮನ್ವಯ ಕೇಂದ್ರದ(ಎಂಆರ್‍ಸಿಸಿ) ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin