ತಮಿಳುನಾಡು ಬಂದ್ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Karnataka

ಬೆಂಗಳೂರು, ಸೆ.16- ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಬಂದ್‍ಗೆ ಕರೆಕೊಟ್ಟಿದ್ದು, ಗಡಿ ಭಾಗದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ, ಮೈಸೂರು ಗಡಿಭಾಗ, ಅತ್ತಿಬೆಲೆ, ಹೊಸೂರು, ಮಾಲೂರು, ಗುಂಡ್ಲುಪೇಟೆ, ಕೊಳ್ಳೆಗಾಲ ಮುಂತಾದ ಗಡಿ ಭಾಗದ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಾಹನಗಳನ್ನು ಗಡಿ ಭಾಗಗಳಲ್ಲಿ ನಿಲ್ಲಿಸಲಾಗಿದೆ.  ಕಳೆದ ಸೋಮವಾರ ಸೆ.12ರಂದು ಕಾವೇರಿ ಸಂಘರ್ಷದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂದು ಗಡಿಭಾಗದ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿದ್ದರು.

ಗಡಿಭಾಗದ ಟೋಲ್‍ಗೇಟ್‍ಗಳನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಎಲ್ಲ ವಾಹನಗಳನ್ನೂ ನಿಲುಗಡೆ ಮಾಡಲಾಗಿದೆ. ಪ್ರಯಾಣಿಕರು 4ಕಿ.ಮೀ. ನಡೆದುಕೊಂಡು ಹೋಗಿ ಬೇರೆ ಬಸ್‍ಗಳನ್ನು ಹಿಡಿದು ಪ್ರಯಾಣಿಸಬೇಕಾದುದು ಕಂಡುಬಂತು.  ಚಾಮರಾಜನಗರ ಜಿಲ್ಲೆಯ ಪುಣಜೂರು, ಪಾಲಾರು ಚೆಕ್‍ಪೋಸ್ಟ್ ಗಳನ್ನು ಬಂದ್ ಮಾಡಲಾಗಿತ್ತು. ಅದೇ ರೀತಿ ಬೆಂಗಳೂರಿಗೆ ಆಗಮಿಸುವ ಹೊಸೂರು ಟೋಲ್‍ಗೇಟ್‍ಅನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಿದ್ದರಿಂದ ಟೋಲ್‍ಗೇಟ್‍ನಲ್ಲಿ ಎರಡೂ ಕಡೆಯಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದ ದೃಶ್ಯ ಕಂಡುಬಂತು.

Facebook Comments

Sri Raghav

Admin