ತಮಿಳುನಾಡು ರಾಜಕೀಯದ ಬೆಳವಣಿಗೆಯ ಲಾಭ ಪಡೆಯಲು ನಮೋ-ಷಾ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Tamilnadu-Modi--01

ಚೆನ್ನೈ/ನವದೆಹಲಿ, ಏ.19– ತಮಿಳುನಾಡಿನಲ್ಲಿ ಕಂಡುಬಂದಿರುವ ರಾಜಕೀಯ ಬೆಳವಣಿಗೆಯ ಪ್ರಯೋಜನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂದಾಗಿದ್ದಾರೆ. ಅನುಕೂಲಸಿಂಧು ರಾಜಕಾರಣಕ್ಕೆ ಹೆಸರಾದ ಈ ಜೋಡಿ ತಮಿಳುನಾಡಿನಲ್ಲಿ ತನ್ನ ದಾಳ ಉರುಳಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯು ತಂತ್ರ ಹೆಣೆದಿದೆ.
ಕಾರಾಗೃಹದಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚಿನ್ನಮ್ಮ ಖ್ಯಾತಿಯ ಶಶಿಕಲಾ ನಟರಾಜನ್ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಅವರನ್ನು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೊರ ಹಾಕಿದ್ದಾರೆ. ಈ ಬೆಳೆವಣಿಗೆಯನ್ನು ಸಮಯಸಾಧಕನತದಿಂದ ಸದುಪಯೋಗಪಡಿಸಿಕೊಳ್ಳಲು ಮೋದಿ ಮತ್ತು ಷಾ ಹೊಸ ಸೂತ್ರವೊಂದನ್ನು ಸಿದ್ದಪಡಿಸಿದ್ದಾರೆ.ಪಳನಿ-ಪನ್ನೀರ್ ಒಗ್ಗೂಡಿ ಸರ್ಕಾರ ರಚಿಸಿ ತಮಿಳುನಾಡು ಜನರ ಅಶೋತ್ತರಗಳನ್ನು ಈಡೇರಿಸುವಂತೆ ಮೋದಿ-ಷಾ ಸಲಹೆ ನೀಡಿದ್ದಾರೆ. ಅಲ್ಲದೆ, ನಿಮ್ಮ ಚಿಹ್ನೆ ನಿಮಗೇ ಲಭಿಸಲಿದೆ ಎಂದು ಭರವಸೆ ನೀಡಿ ಎರಡೂ ಬಣಗಳನ್ನು ಮತ್ತಷ್ಟು ಹತ್ತಿರಕ್ಕೆ ತರಲು ಮುಂದಾಗಿದ್ದಾರೆ. ಈ ಉದ್ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ಪ್ರಯೋಜನಗಳಿವೆ. ತಮಿಳುನಾಡಿಗೆ ಕೇಂದ್ರದ ಕೃಪಾಶೀರ್ವಾದ ನೀಡಿ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಆಯ್ಕೆಯನ್ನು ಸುಗಮಗೊಳಿಸುವುದು ಹಾಗೂ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಬಲಿಷ್ಠ ಪ್ರಾದೇಶಿಕ ಪಕ್ಷವಾಗಿರುವ ಎಐಎಡಿಎಂಕೆ ಬೆಂಬಲ ಗಳಿಸುವ ಗುರಿ ದೂರದೃಷ್ಟಿಯ ಮೋದಿ ಅವರಿಗಿದೆ.

ದಕ್ಷಿಣ ಭಾರತದಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿಗೆ ತಮಿಳುನಾಡಿನ ಬೆಳವಣಿಗೆ ಒಂದು ವರದಾನವಾಗಿದೆ. ದ್ರಾವಿಡ ರಾಜ್ಯದ ಅಗ್ರಮಾನ್ಯ ನಾಯಕರಾದ ಪಳನಿ-ಪನ್ನೀರ್ ಅವರನ್ನು ಒಗ್ಗೊಡಿಸಿ ತಮಿಳರ ಮನಗೆಲ್ಲುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಅವರ ಬೆಂಬಲ ಗಿಟ್ಟಿಸಿ ತಮಿಳುನಾಡಿನಲ್ಲಿ ಬಲವಾಗಿ ಬೇರೂರುವ ಗುರಿಯನ್ನೂ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷರು ಹೊಂದಿದ್ದಾರೆ.  ಪನ್ನೀರ್ ಮೋದಿ ಅವರಿಗೆ ಆಪ್ತರಾಗಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪನ್ನೀರ್ ಮುಖ್ಯಮಂತ್ರಿಯಾದರೆ ಅದು ರಾಜ್ಯ ಮತ್ತು ಕೇಂದ್ರಕ್ಕೂ ಅನುಕೂಲವಾಗಲಿದೆ.

ಒಂದಾಗಿ ಮುಂದೆ ಸಾಗಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಲೋಕಸಭೆ ಚುನಾವಣೆಯಲ್ಲಿ ನಿಮಗೆ 50:50 ಸೀಟು ಕೊಡಲಾಗುವುದು. ರಾಷ್ಟ್ರಪತಿ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿ ಎಂದು ಹಾಲಿ-ಮಾಜಿ ಮುಖ್ಯಮಂತ್ರಿ ಅವರಿಗೆ ಅಭಯ ನೀಡಿರುವ ಪ್ರಧಾನಿ ಆ ಮೂಲಕ ಜಾಣ ನಡೆ ಅನುಸರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin