ತಮಿಳು ಸಿನಿಮಾ, ಪತ್ರಿಕೆ ನಿಷೇಧಿಸಿ : ಅನ್ನದಾನಿ

ಈ ಸುದ್ದಿಯನ್ನು ಶೇರ್ ಮಾಡಿ

ban

ಮಳವಳ್ಳಿ, ಸೆ.23- ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ್ದು ಯಜಮಾನನ ಪಾತ್ರವಿದೆ. ಕಾವೇರಿ ವಿವಾದವನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಅನ್ನದಾನಿ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜ್ಯಗಳ ನಡುವೆ ಸಮಾನತೆ ಸಾಧಿಸಿ ಒಕ್ಕೂಟದ ವ್ಯವಸ್ಥೆ ಕಾಪಾಡಬೇಕಿದೆ. ಆದರೆ ಇದರಲ್ಲಿ ಕೇಂದ್ರ ವಿಫಲವಾಗಿದೆ. ನರೇಂದ್ರಮೋದಿ ಅವರಿಗೆ ಸಾಮರಸ್ಯ ಕಾಪಾಡುವ ಇಚ್ಛಾಶಕ್ತಿ ಇಲ್ಲ ಎಂದು ಆರೋಪಿಸಿದರು.ರೈತನ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಒಂದಲ್ಲೊಂದು ರೀತಿ ರೈತನನ್ನೇ ಅವಲಂಬಿಸಿದ್ದಾರೆ.

 

ಇದನ್ನು ಅರಿಯದ ನರೇಂದ್ರಮೋದಿ ಅನ್ನದಾತನ ಬೆನ್ನಲುಬು ಮುರಿಯಲು ಹೊರಟಿದ್ದಾರೆ ಇದು ಸರಿಯಲ್ಲ ಎಂದು ಕಿಡಿಕಾರಿದರು.
ಸುಪ್ರೀಂ ಕೋಟ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಬಿಸಿ ತಗಲಬೇಕೆಂದರೆ ಕೇಂದ್ರ ಸರ್ಕಾರದ ಯಾವುದೇ ತೆರಿಗೆ ಕಟ್ಟಬಾರದು, ತಮಿಳುನಾಡಿನ ಉತ್ಪನ್ನಗಳು,ತಮಿಳು ಸಿನಿಮಾ ಚಾನಲ್, ಪತ್ರಿಕೆಗಳಿಗೆ ರಾಜ್ಯದಲ್ಲಿ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.ಜಿ.ಪಂ.ಸದಸ್ಯ ಕಂಸಾಗರ ರವಿ.ಸಾಹಳ್ಳಿ ಶಿವಕುಮಾರ್, ನಾರಾಯಾಣ, ದೊಡ್ಡಯ್ಯ, ನಂದಕುಮಾರ ಮುಂತಾದವರು ಪಾಲ್ಗೊಂಡಿದರು

 

► Follow us on –  Facebook / Twitter  / Google+

Facebook Comments

Sri Raghav

Admin