ತಮ್ಮದೇ ಪಕ್ಷದ ಸಂಸದರು ಮತ್ತು ಶಾಸಕರಿಗೆ ಮೋದಿ ಶಾಕ್ : ಬ್ಯಾಂಕ್ ವಹಿವಾಟಿನ ವಿವರ ಸಲ್ಲಿಸುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Shock

ನವದೆಹಲಿ, ನ.29-ನವೆಂಬರ್ 8 ಮತ್ತು ಡಿ.31ರ ನಡುವೆ ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿಗಳ ವಿವರಗಳನ್ನು ಜನವರಿ 1ರಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡುವಂತೆ ಸೂಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರು ಮತ್ತು ಶಾಸಕರಿಗೆ ದಿಢೀರ್ ಶಾಕ್ ನೀಡಿದ್ದಾರೆ.   ನೋಟು ಅಮಾನ್ಯಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿರೋಧಪಕ್ಷಗಳ ಬಾಯಿ ಮುಚ್ಚಿಸಲು ಮೋದಿ ಪ್ರತಿತಂತ್ರ ಅನುಸರಿಸಿದ್ದಾರೆ. ಎಲ್ಲ ಬಿಜೆಪಿ ಸಂಸದರು ಮತ್ತು ಶಾಸಕರು ನೋಟು ರದ್ದತಿ ಪ್ರಕಟಿಸಿದ ದಿನವಾದ ನ.8 ಮತ್ತು ಡಿ.31ರ ನಡುವೆ ತಮ್ಮ ಬ್ಯಾಂಕ್ ಖಾತೆ ಲೆಕ್ಕಗಳ ವಿವರಗಳನ್ನು ಜನವರಿ 1ರಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಜನಪ್ರತಿನಿಧಿಗಳಿಗೂ ಮೋದಿ ಶಾಕ್ ನೀಡಿದ್ದಾರೆ.

ನೋಟು ಅಮಾನ್ಯಗೊಳಿಸುವ ಮುನ್ನವೇ ಬಿಜೆಪಿ ತನಗೆ ಬೇಕಾದವರಿಗೆ ಮತ್ತು ಕೆಲವು ನಾಯಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕತೆ ಪ್ರದರ್ಶಿಸಲು ಮೋದಿ ಈ ಕ್ರಮ ಕೈಗೊಂಡಿದ್ದಾರೆ.  ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಬಿಜೆಪಿಯ ಎಲ್ಲ ಸಂಸದರು ಮತ್ತು ಶಾಸಕರಿಂದ ಅವರ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ ಮತ್ತಿತ್ತರ ಹಣಕಾಸಿನ ವಿವರಗಳನ್ನು ಪಡೆಯುವಂತೆ ಅಮಿತ್ ಷಾ ಅವರಿಗೂ ಸೂಚನೆ ನೀಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin