ತಮ್ಮ ಚಿತ್ರದಲ್ಲಿ ನಟಿಸಲು ಶಂಕರ್ ಅಶ್ವಥ್’ರನ್ನು ಆವ್ಹಾನಿಸಿದ ಪ್ರಥಮ್

ಈ ಸುದ್ದಿಯನ್ನು ಶೇರ್ ಮಾಡಿ

Pratham--01

ಮೈಸೂರು, ಡಿ.31- ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ತಮ್ಮ ಮುಂದಿನ ಚಿತ್ರದಲ್ಲಿ ಖ್ಯಾತ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ನಟಿಸಲು ಆಹ್ವಾನ ನೀಡಿದ್ದಾರೆ. ಶಂಕರ್ ಅಶ್ವಥ್ ಇತ್ತೀಚಿನ ದಿನಗಳಲ್ಲಿ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಅವರು ತಮ್ಮ ಕುಟುಂಬ ನಿರ್ವಹಣೆಗಾಗಿ ಊಬರ್ ಟ್ಯಾಕ್ಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ವಿಷಯ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.ಈ ಹಿನ್ನೆಲೆಯಲ್ಲಿ ಪ್ರಥಮ್ ನಿನ್ನೆ ಸಂಜೆ ಶಂಕರ್ ಅಶ್ವಥ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿ ತಮ್ಮ ಮುಂದಿನ ಚಿತ್ರವಾದ ಪ್ರಥಮ್ ಬಿಲ್ಡ್ ಅಪ್ ಎಂಬ ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಲು ಅವಕಾಶ ನೀಡಿದ್ದಾರೆ.

ಶಂಕರ್ ಅಶ್ವಥ್ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಶಂಕರ್ ಅಶ್ವಥ್ ಅವರಿಗೆ ಚಿತ್ರದಲ್ಲಿ ನಟಿಸಲು ದಿನಾಂಕ ನಿಗದಿಪಡಿಸಿಕೊಳ್ಳಲು ಅವರ ನಿವಾಸಕ್ಕೆ ಬಂದಿದ್ದೇನೆ. ನಾನು ಸಹಾಯ ಮಾಡಲು ಬಂದಿಲ್ಲ. ನನ್ನ ಚಿತ್ರದಲ್ಲಿ ನಟಿಸಲು ಅವರು ಒಪ್ಪಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದರು. ಹಿರಿಯ ನಟರು ನಮ್ಮೊಂದಿಗೆ ಇರಬೇಕು, ಅವರ ತಂದೆಯವರ ಜೊತೆ ನಟಿಸಲು ಆಗಲಿಲ್ಲ. ಶಂಕರ್ ಅಶ್ವಥ್ ಅವರ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ ಎಂದು ಪ್ರಥಮ್ ಹೇಳಿದರು.

Facebook Comments

Sri Raghav

Admin