ತಮ್ಮ ಜೀವನಾಧಾರಿತ ಚಿತ್ರ ನೋಡಿ ಧೋನಿ ಫುಲ್ ಖುಷ್

ಈ ಸುದ್ದಿಯನ್ನು ಶೇರ್ ಮಾಡಿ

Dhoni

ಮುಂಬೈ, ಸೆ.16- ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ತಮ್ಮ ಜೀವನಾಧಾರಿತ ಚಿತ್ರವನ್ನು ನೋಡಿ ಫುಲ್ ಖುಷಿಯಾಗಿದ್ದಾರೆ.
ಈಗಾಗಲೇ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ಧೋನಿ ಪಾತ್ರದಲ್ಲಿ ಸುಶಾಂತ್‌ಸಿಂಗ್ ರಜಪೂತ್ ಅಭಿನಯದ ಅನ್‌ಟೋಲ್ಡ್ ಸಿನಿಮಾದ ಪ್ರೀಮಿಯರ್ ಶೋವನ್ನು ನೋಡಿ ಫುಲ್ ಥ್ರಿಲ್ ಆಗಿದ್ದಾರೆ. ತಮ್ಮ ಬಯೋಪಿಕ್ ಚಿತ್ರವು ಬಾಲಿವುಡ್‌ನಲ್ಲಿ ಅದ್ಭುತವಾಗಿ ಮೂಡಿಬಂದಿರುವುದನ್ನು ನೋಡಿ ಕೂಲ್ ಕ್ಯಾಪ್ಟನ್ ಖುಷಿಯಾಗಿದ್ದು, ಧೋನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶಾಂತ್ ಸಿಂಗ್ ಪಾತ್ರ ಹಾಗೂ ಅಭಿನಯದ ಬಗ್ಗೆ ಧೋನಿ ಹೊಗಳಿದ್ದಾರೆ.

ಈ ಚಿತ್ರದಿಂದ ಸುಶಾಂತ್‌ಗೆ ಬಾಲಿವುಡ್‌ನಲ್ಲಿ ನೆಲೆಯುಳಿಸಿಕೊಳ್ಳಲು ಅದ್ಭುತ ವೇದಿಕೆ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಧೋನಿ ಅಭಿಮಾನಿಗಳು ಚಿತ್ರದ ಟ್ರೈಲರ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin