ತರಕಾರಿ,ಸೊಪ್ಪು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

vegetable

ಚಿಕ್ಕಮಗಳೂರು, ಅ.18- ಪೌಷ್ಠಿಕಾಂಶವುಳ್ಳ ತರಕಾರಿ, ಧಾನ್ಯ, ಸೊಪ್ಪು, ಹಣ್ಣುಹಂಪಲು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಹರಿಹರ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ  ಡಾ.ಸವಿತಾಮಹೇಶ್ ಅಭಿಪ್ರಾಯಿಸಿದರು. ಅಕ್ಕಮಹಾದೇವಿ ಮಹಿಳಾಸಂಘದ ಶರಣೆಕಾಳವ್ವೆ ತಂಡ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸಿಗೇಹುಣ್ಣಿಮೆಯಂದು ಆಯೋಜಿಸಿದ್ದ ವಿಶ್ವಆರೋಗ್ಯದಿನ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಇದೆ. ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಿರುವುದರಿಂದ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮ ಕಂಡುಬರುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದಿರುವ ಹಿನ್ನಲೆಯಲ್ಲಿ ಈಗ ಸಾಂಕ್ರಾಮಿಕರೋಗಗಳು ಕಡಿಮೆಯಾಗಿದ್ದರೂ ಅಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಧುಮೇಹ, ರಕ್ತದೊತ್ತಡ, ಮಾನಸಿಕಖಿನ್ನತೆ ಸೇರಿದಂತೆ ಕಂಡುಕೇಳರಿಯದ ಹೊಸರೋಗಗಳು ವ್ಯಾಪಿಸುತ್ತಿದೆ ಎಂದು ಡಾ.ಸವಿತಾ ಆತಂಕ ವ್ಯಕ್ತಪಡಿಸಿದರು.

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಠಿಕಾಂಶದ ಆಹಾರ ಅಗತ್ಯ. ಮಹಿಳೆಯರು ಮನೆ ಒಳಗೆ ಮತ್ತು ಹೊರಗೆ ಕೆಲಸ ಮಾಡುವುದರಿಂದ ದೈಹಿಕ ಶ್ರಮವೂ ಹೆಚ್ಚಾಗಿರುತ್ತದೆ. ತಮ್ಮ ಆರೋಗ್ಯ ಪಾಲನೆಯತ್ತ ಸದಾ ಜಾಗರೂಕರಾಗಿದ್ದರೆ ಕುಟುಂಬದ ಸುಸ್ಥಿತಿ ಕಾಪಾಡಬಹುದೆಂದರು.ಅಕ್ಕಮಹಾದೇವಿಮಹಿಳಾ ಸಂಘದಅಧ್ಯಕ್ಷೆ ಗೌರಮ್ಮಬಸವೇಗೌಡ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಛಾಪುಮೂಡಿಸಿದ್ದಾರೆ. ಮಹಿಳೆಯರ ಶಿಕ್ಷಣದ ಬಗ್ಗೆ ಗ್ರಾಮೀಣ ಪ್ರದೇಶದಲ್ಲೂ ಸಾಕಷ್ಟು ಜಾಗೃತಿಮೂಡಿದ್ದು, ಕಡವಂತಿಯಂತಹ ಕುಗ್ರಾಮದಲ್ಲಿ ಹುಟ್ಟಿಬೆಳೆದ ಸವಿತಾ, ವೈದ್ಯಕೀಯ ಪದವಿ ಪಡೆದು ಪರಿಶ್ರಮದಿಂದ ಕಲಿತು ಸೇವೆ ಸಲ್ಲಿಸುತ್ತಿರುವುದೇ ಉದಾಹರಣೆ ಎಂದರು.

ಬ್ಯಾಗದಹಳ್ಳಿ ಸರ್ಕಾರಿ ಪ್ರಾಥಮಿಕಶಾಲೆಗೆ ಕಾಳವ್ವೆತಂಡದ ವತಿಯಿಂದ 12 ಸಾವಿರ ರೂ.ಅಂದಾಜಿನ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ನೀಡಲಾಯಿತು. ತಂಡದ ಮುಖಂಡೆ ಚಂದ್ರಮತಿ ಅಣ್ಣೇಗೌಡ, ಅಕ್ಕಮಹಾದೇವಿ ಮಹಿಳಾ ಸಂಘದ ಸದಸ್ಯೆ ಅನುಸೂಯ,ಹೇಮಾವತಿದೇವರಾಜ್, ಸುಮಾಕಿಶನ್, ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಚಂದ್ರಮತಿ, ಕಾರ್ಯದರ್ಶಿ ಹೇಮಲತಾ, ಖಜಾಂಚಿ ಯಮುನಾ ಸಿ.ಶೆಟ್ಟಿ, ಸಹಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ರೇಖಾಉಮಾಶಂಕರ್, ಪುಷ್ಪಾ, ರತ್ನ, ರಮ್ಯ ಪಾಲ್ಗೊಂಡಿದ್ದರು.ಆಟೋಟ ಹಾಗೂ ರಂಗೋಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

 

 

► Follow us on –  Facebook / Twitter  / Google+

Facebook Comments

Sri Raghav

Admin