ತಲಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ನಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

vijayapura-6

ವಿಜಯಪುರ,ಸೆ.12- ಬೆಂಗಳೂರಿನ ಮಾದವ ನಗರದ ತಲಕಾವೇರಿ ಗೃಹ ನಿರ್ಮಾಣ ಸಹಕಾರ ಸಂಘದವರು ಸಂಘದ ಸದಸ್ಯರಿಗೆ ಮುಂದಿನ ಡಿಸೆಂಬರ್ ಒಳಗಾಗಿ 400 ನಿವೇಶನಗಳನ್ನು ವಿತರಿಸಲು ಸಿದ್ದತೆ ಮಾಡಿರುವುದಾಗಿ ಸಂಘದ ಅಧ್ಯಕ್ಷ ರಂಗನಾಥಯ್ಯ ತಿಳಿಸಿದರು.  ಇಲ್ಲಿನ ಕೋಲಾರ ಡೀವಿಯೇಷನ್ ರಸ್ತೆಯಲ್ಲಿ ಏರ್ಪಡಿಸಿದ್ದ ತಲಕಾವೇರಿ ಏರೋ ಸಿಟಿ ನಿರ್ಮಾಣ ಕಾರ್ಯ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ನಾಗೇಶ್‍ಗೌಡ ಮಾತನಾಡಿ, ಬಹುತೇಕ ನಮ್ಮಲ್ಲಿನ ಸದಸ್ಯರು ಮಧ್ಯಮ ವರ್ಗದವರಾಗಿದ್ದು, ಹಣ ಕೂಡಿಸಿ ಮನೆ ಕಟ್ಟಲು ನಿವೇಶನ ಪಡೆಯುವ ಹಂತದಲ್ಲಿದ್ದು, ಯಾವುದೇ ಕಾರಣಕ್ಕೂ ಯಾವುದೇ ಲಿಟಿಗೇಷನ್‍ಗಳ ತೊಂದರೆಯಾಗಬಾರದೆಂದು ಸಂಪೂರ್ಣ ಅರ್ಹ

 

 

ದಾಖಲೆಗಳನ್ನು ಹೊಂದಿ, ಈಗಾಗಲೇ 25 ಎಕರೆ ಜಮೀನು ಖರೀದಿಸಿದ್ದು, 13 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಮಾಡಿಸಲಾಗಿದೆ. ಇನ್ನೊಂದು ತಿಂಗಳು ಉಳಿದ 12 ಎಕರೆ ಜಾಗವನ್ನು ಪರಿವರ್ತನೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಬಯಪ ಸದಸ್ಯ ಎಂ.ಎಲ್.ಕೃಷ್ಣಪ್ಪ ಗೌಡ, ಸಹಕಾರ ಸಂಘದ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಸಿದ್ದರಾಮಯ್ಯ, ರಾಮಯ್ಯ, ಶೋಭ, ಸ್ಥಳೀಯರಾದ ಮಂಡಿಬೆಲೆ ಎಂಪಿಸಿಎಸ್‍ನ ಅಧ್ಯಕ್ಷ ದೇವರಾಜು, ಮಂಜುನಾಥ್, ಕೇಶವ ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

 

Facebook Comments

Sri Raghav

Admin