ತಲಘಟ್ಟಪುರದಲ್ಲಿ ಟ್ಯಾಂಕರ್ ನೀರು ಬಾರದಿದ್ದರೆ ಬಟ್ಟೆ ಒಗೆಯಂಗಿಲ್ಲ, ಸ್ನಾನ ಮಾಡಂಗಿಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

water
ಬೆಂಗಳೂರು, ಏ.12- ನೀರಿನ ಟ್ಯಾಂಕರ್ ಬಂದರೆ ಮಾತ್ರ ನೀರು, ಇಲ್ಲದಿದ್ದರೆ ನೀರಿಗಾಗಿ ಹಾಹಾಕಾರ….ಇದು ಸಿಲಿಕಾನ್ ಸಿಟಿಯಲ್ಲಿರುವ ತಲಘಟ್ಟಪುರದ ಪರಿಸ್ಥಿತಿ. ಬೇಸಿಗೆ ಬಂತೆಂದರೆ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುವುದು ಮಾಮೂಲು. ಇದು ನಿನ್ನೆ, ಮೊನ್ನೆಯಿಂದಲ್ಲ ಕಳೆದ ಹಲವಾರು ವರ್ಷಗಳಿಂದಲೂ ಇಲ್ಲಿ ನೀರಿನ ಅಭಾವ ತಪ್ಪಿಲ್ಲ.ಪ್ರತಿಬಾರಿ ಬೇಸಿಗೆ ಬಂದಾಗ ಜನಪ್ರತಿನಿಧಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಮುಂದಿನ ವರ್ಷದಿಂದ ಈ ಭಾಗದ ನೀರಿನ ಬವಣೆ ತಪ್ಪಿಸುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ. ಆದರೆ ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಬಾರಿಯೂ ತಲಘಟ್ಟಪುರದಲ್ಲಿ ಹನಿ ನೀರಿಗೂ ತತ್ವಾರ ಉಂಟಾಗಿದ್ದು, ಇಲ್ಲಿನ ಜನ ನೀರಿಗಾಗಿ ಬಾಯಿ ಬಾಯಿ ಬಿಡುವಂತಾಗಿದೆ.

ಟ್ಯಾಂಕರ್ ಮೂಲಕ ನೀರು ಬಂದಾಗ ಮಕ್ಕಳು,ವೃದ್ದರು ಬಿಂದಿಗೆ ಹಿಡಿದು ಸಿಕ್ಕಷ್ಟು ನೀರು ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಬಟ್ಟೆ ಹೊಗೆಯೋ ಹಾಗಿಲ್ಲ, ಸ್ನಾನ ಮಾಡೋಂಗಿಲ್ಲ. ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಟ್ಯಾಂಕರ್ ಮಾಲೀಕರು ದುಬಾರಿ ಬೆಲೆಗೆ ನೀರು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.ಕೇವಲ 500 ರಿಂದ 600ರೂ.ಗಳಿದ್ದ ಟ್ಯಾಂಕರ್ ನೀರಿನ ಬೆಲೆ ಇದೀಗ ಏಕಾಏಕಿ ಒಂದು ಸಾವಿರ ರೂ.ಗಳಿಗೆ ಏರಿಕೆ ಮಾಡಿದ್ದಾರೆ. ಉಳ್ಳವರು ಹಣ ಕೊಟ್ಟು ನೀರು ಖರೀದಿ ಮಾಡುತ್ತಾರೆ. ಇಲ್ಲಿನ ಕಡುಬಡವರಿಗೆ ಬಿಬಿಎಂಪಿಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರೇ ಗತಿ. ಒಂದು ವೇಳೆ ಟ್ಯಾಂಕರ್ ನೀರು ಬರದಿದ್ದರೆ ವಾರಗಟ್ಟಲೆ ಸ್ನಾನ ಮಾಡುವಂತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಸ್ಥಳೀಯ ನಿವಾಸಿಗಳು.water-3

water-2

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin