ತಳ್ಳುಗಾಡಿಯಲ್ಲಿ 60 ಕಿ.ಮೀ ಪತ್ನಿ ಶವ ಸಾಗಿಸಿದ ಭಿಕ್ಷುಕ..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body

ಹೈದರಾಬಾದ್,ನ.7-ಭಿಕ್ಷುಕನೊಬ್ಬ ತನ್ನ ಪತ್ನಿಯ ಶವವನ್ನು ವಾಹನದಲ್ಲಿ ಸಾಗಿಸಲು ಹಣವಿಲ್ಲದೆ ತಾನೇ ತಳ್ಳುಗಾಡಿಯಲ್ಲಿ ಸುಮಾರು 60 ಕಿ.ಮೀ ದೂರ ಸಾಗಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕುಷ್ಠರೋಗ ಪೀಡಿತರಾದ ಕವಿತಾ ಹಾಗೂ ರಾಮುಲು ಹೈದರಾಬಾದ್‍ನ ಲಂಗೇರ್ ಹೌಸ್‍ನಲ್ಲಿ ವಾಸಿಸುತ್ತಿದ್ದು, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಆದರೆ ನವಂಬರ್ 4ರಂದು ರಾತ್ರಿ 45 ವರ್ಷದ ಕವಿತಾ ಅನಾರೋಗ್ಯದಿಂದಾಗಿ ಲಿಂಗಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಾವನ್ನಪ್ಪಿದ್ದರು. ಪತಿ ರಾಮುಲು ಮೇದಕ್ ಜಿಲ್ಲೆಯ ಮನ್ನೂರು ಮಂಡಲದ ನಿವಾಸಿಯಾಗಿದ್ದು, ತನ್ನ ಪತ್ನಿಯ ಅಂತಿಮ ವಿಧಿಯನ್ನು ನೆರವೇರಿಸಲು ಶವವನ್ನು ಊರಿಗೆ ಸಾಗಿಸಲು ನಿರ್ಧರಿಸಿದ್ದಾರೆ. ಹಾಗೆಯೇ ಕೆಲ ಖಾಸಗಿ ಸಾಗಣೆ ಸಂಸ್ಥೆಯಲ್ಲಿ ಶವ ಸಾಗಣೆಗೆ ಕೇಳಿದ್ದಾರೆ. ಆದರೆ ಅವರು 5 ಸಾವಿರ ರೂ. ಕೇಳಿದ್ದಾರೆ. ಆದರೆ ಅಷ್ಟು ಹಣ ಇಲ್ಲದ ಹಿನ್ನೆಲೆಯಲ್ಲಿ ತಳ್ಳುಗಾಡಿಯಲ್ಲಿ ಇಟ್ಟು ಸಾಗಣೆ ಮಾಡಿ ವಿಕರಬಾದ್‍ವರೆಗೆ ಹೋಗಿದ್ದಾರೆ.

ಈ ವೇಳೆ ಯಾರೋ, ವ್ಯಕ್ತಿಯೊಬ್ಬ ಶವವನ್ನು ತಳ್ಳುಗಾಡಿಯಲ್ಲಿ ಸಾಗಿಸುತ್ತಿರುವ ಬಗ್ಗೆ ಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಎಚ್ಚೆತ್ತ ಪೊಲೀಸರು ಆತನನ್ನು ವಿಚಾರಿಸಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಕೆಲ ಸ್ಥಳೀಯರು ಹಣ ಸಂಗ್ರಹಿಸಿ ರಾಮುಲುಗೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin