ತಹಸೀಲ್ದಾರ್ ಸಹಿಯನ್ನೇ ಫೋರ್ಜರಿ ಮಾಡಿ ನೌಕರರ ಸಂಬಳ ಲಪಟಾಯಿಸಿದ ಗುಮಾಸ್ತ

ಈ ಸುದ್ದಿಯನ್ನು ಶೇರ್ ಮಾಡಿ

PDO--010

ಬೆಳಗಾವಿ, ಫೆ.10- ತಹಸೀಲ್ದಾರರ ಸಹಿಯನ್ನೇ ನಕಲು ಮಾಡಿ ಸರ್ವೇಯರ್ ನೌಕರರ ವೇತನವನ್ನು ತನ್ನ ಖಾತೆಗೆ ಹಾಕಿಸಿಕೊಂಡ ಚಾಲಾಕಿ ಗುಮಾಸ್ತ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಅಥಣಿ ಪಟ್ಟಣದ ಸರ್ವೇಯರ್ ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತ ಅರುಣ್ ಬಂಧಿತ ಆರೋಪಿ.   ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ತಲೆ ಮರೆಸಿಕೊಂಡಿದ್ದ. ಅಥಣಿ ಪೊಲೀಸ್ ಠಾಣೆಯ ಪಿಎಸ್‍ಐ ಕುಮಾರ ಹಿತ್ತಲಿಮನೆ ವಿಜಯಪುರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈತ ಕಳೆದ ಕೆಲವು ತಿಂಗಳಿನಿಂದ ನೌಕರರಿಗೆ ವಂಚಿಸುತ್ತಿದ್ದ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಒಟ್ಟಾರೆ ತಹಸೀಲ್ದಾರರ ಸಹಿಯನ್ನೇ ಫೋರ್ಜರಿ ಮಾಡಿ ಹಣ ಲಪಟಾಯಿಸುತ್ತಿದ್ದ ಆಸಾಮಿಯ ವೃತ್ತಾಂತ ನೋಡಿ ಈಗ ಜಿಲ್ಲೆಯ ಸಿಬ್ಬಂದಿಗಳು ದಂಗಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin