ತಾಜ್‍ಮಹಲ್ ಸಂರಕ್ಷಣೆ ವಿಫಲವಾಗಿರುವ ಎಎಸ್‍ಐಗೆ ಸುಪ್ರೀಂ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

taj-mahal
ನವದೆಹಲಿ, ಮೇ 10- ಜಗದ್ವಿಖ್ಯಾತ ತಾಜ್‍ಮಹಲ್ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ)ಗೆ ಸುಪ್ರೀಂಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಜ್‍ಮಹಲ್ ಸುತ್ತಮುತ್ತ ಪರಿಸರ ಹದಗೆಟ್ಟಿದೆ. ಕ್ರಿಮಿ-ಕೀಟಗಳು ವಿಶ್ವವಿಖ್ಯಾತ ಸ್ಮಾರಕದ ಸುತ್ತ ಆವರಿಸಿವೆ. ಇಷ್ಟಾದರೂ ತಾಜ್‍ಮಹಲ್ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಎಎಸ್‍ಐ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಟೀಕಿಸಿದೆ.
ತಾಜ್‍ಮಹಲ್ ರಕ್ಷಣೆಗೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಯಮುನಾ ನದಿಯಲ್ಲಿ ಮಲಿನ ನೀರು ನಿಂತಿರುವುದರಿಂದ ತಾಜ್‍ಮಹಲ್ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. ಈ ಬಗ್ಗೆ ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ತಾಜ್‍ಮಹಲ್ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ನಾಡಕರ್ಣಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

Facebook Comments

Sri Raghav

Admin