ತಾಪಂ ಸದಸ್ಯರ ಕಡೆಗಣನೆ : ಅಧಿಕಾರಿಗಳ ವಿರುದ್ಧ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಆ.19– ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಯಾವುದೇ ಸಭೆ ಸಮಾರಂಭಗಳಿಗೆ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೆ ಕಡೆಗಾಣಿಸಿದ್ದಾರೆ ಎಂದು ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಆರೋಪಿಸಿದ್ದಾರೆ.ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಆಚರಿಸುವ ಕಾರ್ಯಕ್ರಮಗಳಿಗೆ ತಾಪಂ ಹಾಗೂ ಜಿಪಂ ಸದಸ್ಯರನ್ನು ಕಡೆಗಾಣಿಸಲಾಗುತ್ತಿದೆ ಎಂದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನಂತರ ಶಿರಸ್ತೇದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಪೂರ್ವ ಭಾವಿ ಸಭೆ ಹಾಗೂ ಇನ್ನಿತರೆ ಯಾವುದೇ ಸಭೆಗೆ ತಾಪಂ ಸದಸ್ಯರನ್ನು ಆಹ್ವಾನಿಸದೇ ಅಧಿಕಾರಿಗಳು ಅವಮಾಸಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕು ಶಿರಸ್ತೇದಾರ್ ಕೃಷ್ಣಮೂರ್ತಿ, ಬಿಇಒ ಸುಂದರೇಶ್ ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಅವರು ಶಾಸಕರ ಗೈರು ಹಾಜರಿಯ ಹಿನ್ನೆಲೆಯಲ್ಲಿ ಅಂದಿನ ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷರಿಗೆ ನೀಡಿ ಸಮಾರಂಭದಲ್ಲಿ ತಾಪಂ ಅಧ್ಯಕ್ಷನಾದ ನನಗೆ ಮತ್ತು ನಮ್ಮ ಸದಸ್ಯರಿಗೆ ಅಗೌರವ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಮಂಜಪ್ಪ, ತಾಪಂ ಸದಸ್ಯರಾದ ಮಂಜುನಾಥ್, ರವಿ, ಕಿಟ್ಟಿ, ಸೋಮಯ್ಯ, ಕಮಲ, ಸಂಗೀತ, ಇಂದಿರಾ, ಸವಿತ, ಸುನೀತ, ರಂಗೇಗೌಡ, ಹರೀಶ ಮತ್ತಿತರರು ಹಾಜರಿದ್ದದರು.

 

► Follow us on –  Facebook / Twitter  / Google+

Facebook Comments

Sri Raghav

Admin