ತಾಪ್ಸಿ ಸಿಟ್ಟಿಗೆದ್ದಿದ್ದೇಕೆ…?

ಈ ಸುದ್ದಿಯನ್ನು ಶೇರ್ ಮಾಡಿ

Tapsi

ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಕುಪಿತಳಾಗಿದ್ದಾಳೆ…! ವಾರಪತ್ರಿಕೆಯೊಂದರ ಸಿನಿಮಾ ಪತ್ರಕರ್ತನೊಬ್ಬ ನನ್ನ ನಕಲಿ ಸಂದರ್ಶನವನ್ನು ಪ್ರಕಟಿಸಿದ್ದೇ ಅಲ್ಲದೆ ಪಾತ್ರವನ್ನು ನೆಗೆಟಿವ್ ಆಗಿ ಬರೆದಿದ್ದಾನೆ ಎಂದು ಪನ್ನು ಗುಡುಗಿದ್ದಾಳೆ.  ‘ಚಶ್ಮೆ ಬದ್ದೂರ್’ ಮತ್ತು ‘ಬೇಬಿ’ ಸಿನಿಮಾಗಳ ಮೂಲಕ ಗಮನ ಸೆಳೆದ ಈಕೆ ‘ಪಿಂಕ್’ ಚಿತ್ರದಲ್ಲಿ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾಳೆ. ಲಾಯರ್ ದೀಪಕ್ (ಬಿಗ್ಬಿ) ಈ ಸಿನಿಮಾದಲ್ಲಿ ಆರೋಪಿ ತಾಪ್ಸಿಯನ್ನು ಪ್ರಶ್ನಿಸುವ 2.26 ನಿಮಿಷಗಳ ವೀಡಿಯೋ ಈಗಾಗಲೇ ಜನಪ್ರಿಯವಾಗಿದೆ.  ಆದರೆ, ಪತ್ರಿಕೆಯೊಂದರಲ್ಲಿ ಈಕೆ ಪಿಂಕ್ ಸಿನಿಮಾದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಎಂದು ಪ್ರಕಟಗೊಂಡಿದೆ. ಇದರಿಂದ ಕುಪಿತಳಾದ ತಾಪ್ಸಿ, ನಾನು ಈ ಚಿತ್ರದಲ್ಲಿ ರೇಪ್ ವಿಕ್ಟಿಮ್ ಅಲ್ಲ ಅಥವಾ ಈ ರೀತಿಯ ಸಂದರ್ಶನವನ್ನು ನಾನು ನೀಡಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾಳೆ.

‘ಇಂಥ ಸುಳ್ಳು ಸುದ್ದಿಗಳನ್ನು ನಾನು ಸಹಿಸಲಾರೆ. ನಾನು ಈ ಸಿನಿಮಾದಲ್ಲಿ ಕೊಲೆ ಆರೋಪಿಯಾಗಿ ನಟಿಸಿದ್ದೇನೆ ಹೊರತು ಅತ್ಯಾಚಾರಕ್ಕೆ ಒಳಗಾದ ಯುವತಿಯ ಪಾತ್ರದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin