ತಾಯಿಯನ್ನು ಕೆಣಕಿದ ಕಾಮುಕನಿಗೆ ಮಗಳಿಂದ ಚಪ್ಪಲಿ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

Haveri--01

ಹಾವೇರಿ,ಆ.20-ತನ್ನ ತಾಯಿಯನ್ನು ಕೆಣಕಿದ ಕಾಮುಕನೊಬ್ಬನನ್ನು ಮಗಳು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆದಿದೆ. ಊರಿಗೆ ಹೋಗಲು ಬಸ್‍ನಿಲ್ದಾಣದಲ್ಲಿ ಬಸ್‍ಗಾಗಿ ತಾಯಿ, ಮಗಳು ಕಾಯುತ್ತಿದ್ದರು. ಇದೇ ವೇಳೆ ದುಷ್ಕರ್ಮಿಯೊಬ್ಬ ಬಂದು ತಾಯಿಯನ್ನು ಕೆಣಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಗಳು ಕಾಲಿನಲ್ಲಿದ್ದ ಚಪ್ಪಳಿ ಬಿಚ್ಚುಕೊಂಡು ಕಾಮುಕನಿಗೆ ಚಪ್ಪಳಿ ಸೇವೆ ನಡೆಸಿದ್ದಾಳೆ.

ಆ ಸಂದರ್ಭದಲ್ಲಿ ಜನ ಗುಂಪುಕೂಡಿ ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಮುಕನನ್ನು ರಸ್ತೆಯಲ್ಲೆ ಚಪ್ಪಳಿಯಿಂದ ಹೊಡೆದ ಯುವತಿಯ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Facebook Comments

Sri Raghav

Admin