ತಾಯಿ ನಿರ್ಲಕ್ಷ್ಯದಿಂದ ವಾಷಿಂಗ್ ಮೆಷಿನ್‍ನಲ್ಲಿ ಬಿದ್ದು 3 ವರ್ಷದ ಅವಳಿ ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Washing-machine

ನವದೆಹಲಿ, ಫೆ.26-ತಾಯಿಯ ನಿರ್ಲಕ್ಷ್ಯದಿಂದಾಗಿ ಮೂರು ವರ್ಷದ ಅವಳಿ ಮಕ್ಕಳು ಸಾವಿಗೀಡಾದ ದುರಂತ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಸಂಭವಿಸಿದೆ.   ವಾಷಿಂಗ್ ಪೌಡರ್ ತರಲು ಅಂಗಡಿಗೆ ಹೋಗಿ ಬರುವುದರೊಳಗಾಗಿ ನೀರು ತುಂಬಿಕೊಂಡಿದ್ದ ವಾಷಿಂಗ್ ಮೆಷಿನ್ ಒಳಗೆ ಇಳಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.   ತಾಯಿ ಬಟ್ಟೆ ತೊಳೆಯಲೆಂದು ವಾಷಿಂಗ್ ಮೆಷಿನ್‍ಗೆ ನೀರು ತುಂಬಿಸಿದ್ದರು. ಆದರೆ ಡಿಟರ್ಜೆಂಟ್ ಇಲ್ಲದ ಕಾರಣ ನಿಶಾಂತ್ ಮತ್ತು ನಕ್ಷ್ಯ ಎಂಬ ಇಬ್ಬರು ಅವಳಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಸಮೀಪದ ಅಂಗಡಿಗೆ ಹೋದರು. ಆರು ನಿಮಿಷಗಳ ನಂತರ ಹಿಂದಿರುಗಿದಾಗ ಮಕ್ಕಳು ಮನೆಯಲ್ಲಿ ಕಾಣಲಿಲ್ಲ.

ಪತಿಗೆ ಸುದ್ದಿ ತಿಳಿಸಿ ಪೊಲೀಸರಿಗೂ ಮಾಹಿತಿ ನೀಡಿದರು. 20 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯನ್ನೆಲ್ಲ ಹುಡುಕಾಡಿದರು. ನಂತರ ವಾಷಿಂಗ್ ಮೆಷಿನ್‍ನಲ್ಲಿ ನೋಡಿದಾಗ ಇಬ್ಬರು ಮಕ್ಕಳು ನೀರಿನಲ್ಲಿ ಇಳಿದು ಮೃತಪಟ್ಟಿರುವುದು ಪತ್ತೆಯಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin