ತಾಯಿ, ಮಗಳ ಮೇಲೆ ಅತ್ಯಾಚಾರವೆಸಗಿದ್ದ ಸಬ್‍ ಇನ್ಸ್ಪೆಕ್ಟರ್ ಒಬ್ಬರ ಕಾಮುಕ ಪುತ್ರನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

JAIL-RAPE

ಗುರುಗ್ರಾಮ್, ಜೂ.10-ವಿಧವೆ ಮತ್ತು ಆಕೆಯ 15 ವರ್ಷದ ಮಗಳ ಮೇಲೆ ಕಳೆದ ಮೂರು ವಾರಗಳಿಂದ ಸತತ ಅತ್ಯಾಚಾರ ಎಸಗಿದ್ದ ದೆಹಲಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಒಬ್ಬರ ಕಾಮುಕ ಪುತ್ರನನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ. ಸರಣಿ ಸಾಮೂಹಿಕ ಅತ್ಯಾಚಾರಗಳು ಮತ್ತು ಕೊಲೆ ಪ್ರಕರಣಗಳಿಂದ ಸುದ್ದಿಯಾಗುತ್ತಿರುವ ದೆಹಲಿ-ಗುರ್‍ಗಾಂವ್‍ಗೆ ಈ ಘಟನೆಯಿಂದ ಮತ್ತೊಂದು ಕಳಂಕ ಅಂಟಿದಂತಾಗಿದೆ.   ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಆಶೀಶ್ ಕುಮಾರ್(23) ಆರೋಪಿ. ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿ ಆ ಕೃತ್ಯಗಳನ್ನು ತನ್ನ ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದು ಬ್ಲಾಕ್‍ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಈತನನ್ನು ಬಂಧಿಸಿಲಾಗಿದೆ. ಆರೋಪಿಯಿಂದ ಮೊಬೈಲ್‍ಫೋನ್‍ನೊಂದಿಗೆ 10 ವೀಡಿಯೋ ಕ್ಲಿಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿಧವೆಯಾಗಿರುವ 36 ವರ್ಷದ ಮಹಿಳೆ ಗೋಪಾಲ್‍ಪುರ್ ಪ್ರದೇಶದ ಅಮರ್ ಕಾಲೋನಿಯಲ್ಲಿ ತನ್ನ 15 ವರ್ಷದ ಮಗಳು ಮತ್ತು 11 ವರ್ಷದ ಮಗನೊಂದಿಗೆ ವಾಸವಾಗಿದ್ದರು. ಉತ್ತರಾಖಂಡ್ ಮೂಲದವರಾದ ಅವರ ಪತಿ ಕಳೆದ ವರ್ಷ ಮೃತಪಟ್ಟಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದರು. ಕಳೆದ 25 ದಿನಗಳ ಹಿಂದೆ ಗುರುಗ್ರಾಮದ ರಾಜೇಂದ್ರ ಪಾರ್ಕ್‍ನ ಮಾರುಕಟ್ಟೆಯಲ್ಲಿ ಮಹಿಳೆಗೆ ಪರಿಚಿತನಾದ ಆಶೀಶ್ ನೆರವು ನೀಡುವ ನೆಪದಲ್ಲಿ ಅಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಇದೇ ವೇಳೆ ಮಹಿಳೆ ಮತ್ತು 10ನೇ ತರಗತಿಯಲ್ಲಿ ಓದುತ್ತಿದ್ದ ಮಗಳ ಮೇಲೆ ಕಣ್ಣು ಹಾಕಿದ. ಸಮಯ ಸಾಧಿಸಿ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿದ. ಅಲ್ಲದೆ, ಕೃತ್ಯದ ದೃಶ್ಯಗಳನ್ನು ಸೆಲ್‍ಫೋನ್‍ನಲ್ಲಿ ಸೆರೆಹಿಡಿದು ಬ್ಲಾಕ್‍ಮೇಲ್ ಮಾಡುತ್ತಾ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಕಳೆದ ಮೂರು ವಾರಗಳಿಂದ ಈತ ಪದೇ ಪದೇ ಅತ್ಯಾಚಾರ ಎಸಗಿದ ಎನ್ನಲಾಗಿದೆ.ಇವನ ವಿಕೃತ ಕಾಮ ಮತ್ತು ಬ್ಲಾಕ್‍ಮೇಲ್‍ನಿಂದ ಕಂಗಾಲಾದ ಮಹಿಳೆ ಪೊಲೀಸರಿಗೆ ದೂರು ನೀಡಿದರು. ಮತ್ತೆ ಕೃತ್ಯ ಎಸಗಲು ಮಹಿಳೆಯ ಮನೆಗೆ ಬಂದಿದ್ದ ಆಶೀಶ್ ಕುಮಾರ್‍ನನ್ನು ಪೊಲೀಸರು ಬಂಧಿಸಿದರು.   ಕಳೆದ ವಾರವಷ್ಟೇ ಮೂವರು ಕಾಮುಕರು ಆಟೋದಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಮಗುವನ್ನು ರಸ್ತೆಗೆ ಎಸೆದು ಕೊಂದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin