ತಾಯಿ-ಶಿಶು ಮರಣ ಪ್ರಮಾಣದಲ್ಲಿ ಸುಧಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

sULIBELE

ಸೂಲಿಬೆಲೆ,ಆ.8-ನವಜಾತ ಶಿಶು ಮರಣ, ಪ್ರಸವ ಪೂರ್ವ ತಾಯಿ ಮರಣ ಹಾಗೂ ಇತರೆ ತಾಯಿ ಮಗುವಿನ ಆರೋಗ್ಯ ಸೂಚ್ಯಂಕಗಳಲ್ಲಿ ಕಳೆದ ಒಂದು ದಶಕದಲ್ಲಿ ಭಾರತ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಆಕ್ಸನ್ ನೋಬಲ್ ಸಂಸ್ಥೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಪ್ರೀತಿಷಾ ಕರ್ಟಿಸ್ ತಿಳಿಸಿದರು.  ಹೋಬಳಿಯ ಕಂಬಳೀಪುರ ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಕಠಿಣ ಪರಿಶ್ರಮದಿಂದ ಮರಣ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳೊಡನೆ ದಾಪುಗಾಲಿಡಲು ಇನ್ನೂ ಬಹಳದೂರ ಕ್ರಮಿಸಬೇಕು ಎಂದರು.

ಆಧುನಿಕ ಆವಿಷ್ಕಾರಗಳು ಹಾಗೂ ಅಧ್ಯಯನಗಳು ಕೇವಲ ನಗರದ ಗಣಕಯಂತ್ರ ಹಾಗೂ ಕಡತಗಳಲ್ಲಿ ಉಳಿಯದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಈ ದಿಸೆಯಲ್ಲಿ ಶ್ರಮಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಆಕ್ಸನ್ ನೋಬಲ್ ಕಂಪನಿಯ ಕಾರ್ಯ ಶ್ಲಾಘನೀಯ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪತಿಳಿಸಿದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೀಡುತ್ತಿರುವ ಪೌಷ್ಠಿಕ ಆಹಾರ ಹಾಗೂ ಸಲಹೆ ಸೂಚನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಇಲಾಖೆಯ ಮೇಲ್ವಿಚಾರಕಿ ಪುಷ್ಪನುಡಿದರು.

Facebook Comments

Sri Raghav

Admin