ತಾಲಿಬಾನ್ ಮುಖಂಡ ಭಯೋತ್ಪಾದಕನಲ್ಲವೇ..?: ವಿಶ್ವಸಂಸ್ಥೆಗೆ ಭಾರತ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Taliban

ವಿಶ್ವಸಂಸ್ಥೆ, ಸೆ.15- ತಾಲಿಬಾಲ್ ನಾಯಕನನ್ನು ಭಯೋತ್ಪಾದಕನಾಗಿ ಗುರುತಿಸದೇ ಇರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತವು, ಈ ಧೋರಣೆ ತನಗೆ ರಹಸ್ಯವಾಗಿಯೇ ಉಳಿದಿದೆ ಎಂದು ಕಟುವಾಗಿ ಟೀಕಿಸಿದೆ. ವಿಶ್ವಸಂಸ್ಥೆಯಲ್ಲಿ ನಿನ್ನೆ ನಡೆದ ಅಫ್ಘಾನಿಸ್ತಾನ ಕುರಿತ ಭದ್ರತಾ ಮಂಡಳಿ ಚರ್ಚೆಯಲ್ಲಿ ಮಾತನಾಡಿದ ಉಪ ಶಾಶ್ವತ ಪ್ರತಿನಿಧಿ ರಾಯಭಾರಿ ತನ್ಮಯ ಲಾಲ್ ಅವರು ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳಿಗೆ ನೆರೆ ರಾಷ್ಟ್ರವು ಸುರಕ್ಷಿತ ಸ್ವರ್ಗವಾಗಲು ಅವಕಾಶ ನೀಡಬಾರದು ಎಂದರು.

ತಾಲಿಬಾನ್ ನಾಯಕನನ್ನು ಭಯೋತ್ಪಾದನಾಗಿ ಬಿಂಬಿಸದೇ ಇರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಡೆಯು ನಮಗೆ ನಿಗೂಢವಾಗಿ ಉಳಿದಿದೆ ಎಂದು ಟೀಕಿಸಿದರು. ಅಮೆರಿಕ ಮೇ ತಿಂಗಳಿನಲ್ಲಿ ನಡೆಸಿದ ಡ್ರೋಣ್ ದಾಳಿಯಲ್ಲಿ ಮುಲ್ಲಾ ಅಖ್ತರ್ ಮಹಮದ್ ಮನ್ಸೂರ್ ಹತನಾದ ನಂತರ ತಾಲಿಬಾನ್ ತನ್ನ ಹೊಸ ನಾಯಕನಾಗಿ ಕಟ್ಟವಾದಿ ಧಾರ್ಮಿಕ ಮುಖಂಡ ಮೌಲ್ವಿ ಹೈಬತುಲ್ಲಾ ಅಖುಂದ್‍ಝಾದನನ್ನು ನೇಮಕ ಮಾಡಿತ್ತು. ಆತನನ್ನು ಭಯೋತ್ಪಾದಕನಾಗಿ ಗುರುತಿಸದೇ ಇರುವ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin