ತಾಲೂಕಿನಲ್ಲಿ ಐತಿಹಾಸಿಕ ದಾಖಲೆ : ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

Y--S-V-DATTA

ಕಡೂರು, ಸೆ.10- ಕಳೆದ 25 ವರ್ಷಗಳಿಂದ ಆಶ್ರಯ ಯೋಜನೆಯಿಂದ ನಿವೇಶನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿರಲಿಲ್ಲ. ಆದರೆ ಇಂದು ಕಸುವನಹಳ್ಳಿಯಲ್ಲಿ 61 ಜನ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ದಾಖಲೆ ನಿರ್ಮಿಸಲಾಗಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.
ಸಿಂಗಟಗೆರೆ ಗ್ರಾಪಂ ವ್ಯಾಪ್ತಿಯ ಕಸುವನಹಳ್ಳಿಯಲ್ಲಿ ಜಿ.ಪಂ. ಹಾಗೂ ತಾಪಂ ವತಿಯಿಂದ ಏರ್ಪಡಿಸಿದ್ದ ನಿವೇಶ ರಹಿತರಿಗೆ ಹಕ್ಕುಪತ್ರ ನೀಡಿ ಮಾತನಾಡಿದರು. ಗ್ರಾಪಂನಲ್ಲಿ ಕ್ರಿಯಾಶೀಲ ಸದಸ್ಯರಿದ್ದರೆ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯ. ಈಗಾಗಲೇ ತಾಲೂಕಿನಲ್ಲಿ ನಿವೇಶನ ರಹಿತರ ಪಟ್ಟಿ ಸಿದ್ದಪಡಿಸಲು ಎಲ್ಲಾ 49 ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

 

 

ಕಸುವನಹಳ್ಳಿ, ಗರುಗದಹಳ್ಳಿ, ಉಡುಗೆರೆ, ಎಸ್.ಮಾದಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ನಿವೇಶನ ರಹಿತರ ಪಟ್ಟಿ ಸಿದ್ದವಿದ್ದು ಅದರಲ್ಲೂ ಕಸುವನಹಳ್ಳಿಯ ರಂಗನಾಥ್ ತಮ್ಮ 2 ಎಕರೆ ಭೂಮಿಯನ್ನು ಸರ್ಕಾರಕ್ಕೆ ಕಡಿಮೆ ಬೆಲೆಗೆ ನೀಡಿ ನೂರಾರು ವಸತಿರಹಿತರಿಗೆ ಬೆಳಕಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕರ ಮತ್ತು ಸರ್ಕಾರದ ಸಹಕಾರದಿಂದ ಇಂದು ಸುಮಾರು 61 ಜನ ರಲ್ಲಿ 31 ಜನರಿಗೆ (ಪರಿಶಿಷ್ಟ ಜಾತಿಯವರಿಗೆ) ಆಶ್ರಯ ನಿವೇಶನಗಳ ಹಕ್ಕು ಪತ್ರ ನೀಡಲಾಗಿದೆ. ಕಳೆದ 25 ವರ್ಷಗಳಿಗೆ ಹೋಲಿಸಿದರೆ ಇದು ಸರ್ವಕಾಲಿಕ ದಾಖಲೆ ಎಂದ ಅವರು, ಇದೇ ರೀತಿ ಗರಗದಹಳ್ಳಿ ಸೇರಿದಂತೆ 5 ಹಳ್ಳಿಗಳಲ್ಲಿ ನಿವೇಶನಗಳನ್ನು ನೀಡಲಾಗುವುದು ಎಂದರು. ಸರ್ಕಾರ 1.85 ಸಾವಿರ ರೂ. ಹಣ ನೀಡಲಿದ್ದು ಕೂಡಲೇ ಹಕ್ಕುಪತ್ರ ಪಡೆದವರು ಮನೆಗಳನ್ನು ನಿರ್ಮಿಸಿಕೊಳ್ಳಿ ಎಂಬ ಸಲಹೆ ನೀಡಿದರು. ಸಿಂಗಟಗೆರೆ ಗ್ರಾಪಂ ಅಧ್ಯಕ್ಷೆ ಕವಿತಾ, ಸದಸ್ಯರಾದ ಸುರೇಶ್, ದೇವಾನಂದ, ಲಲಿತಮ್ಮ, ದೇವಿರಮ್ಮ, ಸವಿತಾ ಕಲ್ಲೇಶಪ್ಪ, ನಾಗರಾಜ್, ಇಒ ಗೋಪಾಲಕೃಷ್ಣ, ಪಿಡಿಒ ರಾಜೇಶ್, ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin