ತಾಲೂಕಿನಾದ್ಯಾಂತ ಸಂಭ್ರಮದ 70ನೆ ಸ್ವಾತಂತ್ರ್ಯ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

maluru-9

ಮಾಲೂರು, ಆ.16- ತಾಲೂಕಿನಾದ್ಯಾಂತ 70ನೆ ಸ್ವಾತಂತ್ರ್ಯ ದಿನವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 70ನೆ ಸ್ವಾತಂತ್ರ್ಯ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಸ್.ಮಂಜುನಾಥ್‍ಗೌಡ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಸಹಕರಿಸುವಂತೆ ಮನವಿ ಮಾಡಿದರು. ಸಮಾರಂಭದಲ್ಲಿ ಅಧಿಕಾರಿಗಳ ಗೈರು ಕಂಡು ಬೇಸರ ವ್ಯಕ್ತಪಡಿಸಿದರು.ತಹಸೀಲ್ದಾರ್ ಎಸ್.ನಾಗರಾಜ್, ಸಿಪಿಐ ರಾಘವೇಂದ್ರನ್, ಎಸ್‍ಐ ಮುರುಳಿ ಯೋಗಗುರು ಎಂ.ಆರ್.ಶಂಕರ್‍ಸಿಂಗ್, ಜಿಪಂ ಸದಸ್ಯರಾದ ಭಾಗ್ಯವತಿ ಆಗ್ರಿ ನಾರಾಯಣಪ್ಪ, ತಾಪಂ ಅಧ್ಯಕ್ಷೆ ತ್ರಿವರ್ಣರವಿ, ಉಪಾಧ್ಯಕ್ಷೆ ನಾಗವೇಣಿ ಚಂದ್ರು, ಸದಸ್ಯ ಎಚ್.ಎನ್.ಶ್ರೀನಾಥ್, ವಿದ್ಯಾ ಸುಮಂತ್ ಮತ್ತಿತರರಿದ್ದರು.  ಸಮತಾ ನಗರದಲ್ಲಿ ನ್ಯಾಯಾಲಯದ ಆವರಣದಲ್ಲಿ ಕೂಡ ಸ್ವಾತಂತ್ರ್ಯೋತ್ಸ ಆಚರಿಸಲಾಯಿತು. ದೇಶಾಭಿಮಾನಿ ಬಳಗದ ವತಿಯಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾತಂತ್ರ್ಯ ದಿನ ಆಚರಣೆ ಮಾಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin