ತಾಲೂಕು ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಲಕ್ಷ್ಮಿನಾರಾಯಣ ಆಯ್ಕೆ
ಈ ಸುದ್ದಿಯನ್ನು ಶೇರ್ ಮಾಡಿ
ಪಿರಿಯಾಪಟ್ಟಣ, ಮಾ.3– ತಾಲೂಕಿನ ಯುವ ಶಕ್ತಿಯನ್ನು ಸದ್ಬಳಕೆ ಮಾಡುವ ಹಾಗೂ ಬಿಜೆಪಿ ಪಕ್ಷ ಸಂಘಟಿಸುವ ಉದ್ದೇಶದಿಂದ ತಾಲೂಕು ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಲಕ್ಷ್ಮಿನಾರಾಯಣ.ಪಿ.ಟಿ.ರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ ತಿಳಿಸಿದ್ದಾರೆ.ತಾಲೂಕಿನ ವಿವಿಧ ಶಕ್ತಿಕೇಂದ್ರಗಳ ಅಧ್ಯಕ್ಷರ ಆಯ್ಕೆ ಮಾಡಲಾಗಿದ್ದು, ಹುಣಸವಾಡಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್.ಹೆಚ್.ಎಸ್.(ಕುಂದನಹಳ್ಳಿ), ಕೊಪ್ಪ ಶಕ್ತಿಕೇಂದ್ರ ಅಧ್ಯಕ್ಷ ರವಿ(ಚಿಕ್ಕಹೊಸೂರು), ಹಲಗನಹಳ್ಳಿ ಶಕ್ತಿಕೇಂದ್ರ ಅಧ್ಯಕ್ಷ ರಾಮೇಗೌಡ(ಕಣಗಾಲು), ಬೆಟ್ಟದಪುರ ಶಕ್ತಿಕೇಂದ್ರ ಅಧ್ಯಕ್ಷ ಸುಂದರ, ರಾವಂದೂರು ಶಕ್ತಿಕೇಂದ್ರ ಅಧ್ಯಕ್ಷ ಪ್ರಭಾಕರ ಆರಾಧ್ಯ, ಕಂಪಲಾಪುರ ಶಕ್ತಿಕೇಂದ್ರ ಅಧ್ಯಕ್ಷರಾಗಿ ಶರವಣ(ಪಂಚವಳ್ಳಿ) ರವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments