ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಶ್ರಮ

ಈ ಸುದ್ದಿಯನ್ನು ಶೇರ್ ಮಾಡಿ

jds
ತರೀಕೆರೆ, ಫೆ.24- ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ. ಸಂಘಟನೆಯ ದೃಷ್ಠಿಯಿಂದ ಹಿಂದೆ ಬಿದ್ದಿರುವ ಈ ಕ್ಷೇತ್ರದಲ್ಲಿ ಪ್ರತಿ ಬೂತ್ ಮಟ್ಟದಲ್ಲು ಕಾರ್ಯಕರ್ತರನ್ನು ಹುರಿದುಂಬಿಸಿ ಸಂಘಟನೆ ಬಲಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ತರೀಕೆರೆ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. 2018ರ ಚುನಾವಣೆಯಲ್ಲಿ ಸಮರ್ಥವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ಸಾಧಿಸಲು ಬೇಕಾದ ಎಲ್ಲಾ ರಾಜಕೀಯ ತಂತ್ರಗಳನ್ನು ಮಾಡಲಾಗುವುದು ಎಂದು ಹೇಳಿದರು. ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಮತ್ತು ವಿವಿಧ ಪಕ್ಷಗಳಿಂದ ಜೆಡಿಎಸ್ ಸೇರಲು ಯುವ ಶಕ್ತಿ ಮುಂದಾಗಿದೆ. ಯುವ ಶಕ್ತಿಗೆ ಸಮರ್ಥವಾದ ನಾಯಕತ್ವ ನೀಡುವ ಬಗ್ಗೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ಸದ್ಯದಲ್ಲೇ ಜಿಲ್ಲೆಗೆ ಆಗಮಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ರಾಷ್ಟ್ರೀಯ ಪಕ್ಷಗಳಲ್ಲಿ ಜನತೆ ವಿಶ್ವಾಸ ಕಳೆದುಕೊಂಡಿದ್ದು ಪ್ರಾದೇಶಿಕ ಪಕ್ಷಗಳ ಮೇಲೆ ಭರವಸೆ ಇಟ್ಟಿದ್ದಾರೆ. ಸ್ಥಳೀಯವಾಗಿ ಪ್ರಾದೇಶಿಕ ಪಕ್ಷಗಳು ಸದೃಢವಾಗಿದ್ದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಚಿಂತನೆಗಳಿಗೆ ಮಹತ್ವ ಕೊಡುತ್ತದೆ ಎಂದ ಅವರು, ಇದಕ್ಕೆ ಉದಾಹಣೆಯಾಗಿ ತಮಿಳುನಾಡು ಸರ್ಕಾರವನ್ನು ಪ್ರಸ್ತಾಪಿಸಿದರು.ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪನವರು ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತ ಪಡಿಸಿದ್ದು, ಸೂಕ್ತ ಸಮಯದಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹೆಚ್.ಎನ್. ಗೋಪಿಕೃಷ್ಣ ರವರನ್ನು ಸಹ ಪಕ್ಷಕ್ಕೆ ಸೇರಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಇದರ ಜೊತೆ ಬಿಜೆಪಿಯ ಹಲವು ನಾಯಕರುಗಳು ಪಕ್ಷ ಸೇರಲು ಮುಂದಾಗಿದ್ದಾರೆ ಎಂದರು.ಎಪಿಎಂಸಿ ಉಪಾಧ್ಯಕ್ಷ ಪಾಂಡುರಂಗಜಾದವ್, ಟಿ.ಡಿ.ಆನಂದಕುಮಾರ್, ಕೆಂಪೆಗೌಡ, ಮಂಜುನಾಥ್, ಸೇರಿದಂತೆ ಜೆ.ಡಿ.ಎಸ್‍ನ ಅನೇಕ ನಾಯಕರುಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin