ತಾಲ್ಲೂಕು ಕಚೇರಿಗೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

kr-pete

 

ಕೆ.ಆರ್.ಪೇಟೆ,ಆ.12- ಹೇಮಾವತಿ ರೈತರ ಪಾಲಿನ ನೀರನ್ನು ಕೆ.ಆರ್.ಎಸ್.ಹೆ ಹರಿಸುವ ಮೂಲಕ ಅನ್ಯಾಯ ಮಾಡುತ್ತಿರುವ ಹೇಮಾವತಿ ಜಲಾಶಯ ಯೋಜನೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ತಾಲ್ಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹೇಮಾವತಿ ಜಲಾಶಯದಲ್ಲಿ ನೀರು ಸಂಗ್ರಹಗೊಳ್ಳಲು ಬಿಡದೆ ಒಳಹರಿವಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಕೆಆರ್‍ಎಸ್‍ಗೆ ಬಸಿದುಕೊಳ್ಳಲಾಗಿದೆ. ಕಳೆದ 20ದಿನಗಳ ಕಾಲ ನಿತ್ಯ 3ಸಾವಿರ ಕ್ಯೂಸೆಕ್ಸ್ ನೀರು ಹರಿದುಹೋಗಿದೆ. ಇದರಿಂದ ಸುಮಾರು 4 ಟಿಎಂಸಿ ನೀರು ಕೆ.ಆರ್.ಎಸ್. ಪಾಲಾಗಿದೆ ಎಂದು ದೂರಿದ ಪ್ರತಿಭಟನಾಕಾರರು ಇದಕ್ಕೆ ಹೇಮಾವತಿ ಜಲಾಶಯ ಯೋಜನೆಯ ಅಧಿಕಾರಿಗಳೇ ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಡಿಕೆಯಂತೆ ತಾಲೂಕಿನಲ್ಲಿ ಮಳೆ ಬೀಳದ ಕಾರಣ ಕೆರೆ-ಕಟ್ಟೆಗಳು ಒಣಗಿ ನಿಂತಿವೆ. ಜನ-ಜಾನುವಾರುಗಳಿಗೆ ನೀರಿಗೆ ತೊಂದರೆಯಾಗಿದೆ. ಬೋರ್‍ವೆಲ್‍ಗಳಲ್ಲಿ ಅಂರ್ತಜಲ ಕುಸಿದಿದೆ. ಹಾಗಾಗಿ ಹೇಮಾವತಿಯ ನೀರನ್ನು ಮೊದಲು ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ನಂತರ ಕಾಲುವೆಗಳಿಗೆ ಹರಿಸಬೇಕು ಯಾವುದೇ ಕಾರಣಕ್ಕೂ ಹೇಮಾವತಿಯಿಂದ ಕೆ.ಆರ್.ಎಸ್.ಗೆ ಬಸಿದುಕೊಳ್ಳಬಾರದು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕರ್ತೇನಹಳ್ಳಿ ಸುರೇಶ್, ತಾಲೂಕು ಅಧ್ಯಕ್ಷ ಅನಂತು, ಉಪಾಧ್ಯಕ್ಷ ಬೀರವಳ್ಳಿ ಕುಮಾರ್, ಜಿ.ಕೆ.ಪ್ರದೀಪ್, ಸಂಘಟನಾ ಕಾರ್ಯದರ್ಶಿ ನಿಂಗೇಗೌಡ, ಮಹಿಳಾ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ಸವಿತಾ, ಪ್ರಧಾನಕಾರ್ಯದರ್ಶಿ ಆಶಾ, ಸಂಘಟನಾ ಕಾರ್ಯದರ್ಶಿ ಲತಾ, ಜಿಲ್ಲಾ ಉಪಾಧ್ಯಕ್ಷೆ ಶಿವಮ್ಮ ಮತ್ತಿತರರ ನೇತೃತ್ವ ವಹಿಸಿದ್ದರು. ಪ್ರತಿಭಟನೆಯ ನಂತರ ಉಪತಹಸೀಲ್ದಾರ್ ಮಹದೇವೇಗೌಡ ಅವರಿಗೆ ಮನವಿ ಸಲ್ಲಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin